ಪಟ್ಟಣದಲ್ಲಿ ಈದುಲ್ ಫಿತ್ರ್ ಆಚರಣೆ

23Kush01
Published on

ಕುಶಾಲನಗರ: ಪಟ್ಟಣದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಶನಿವಾರ ಹಿಲಾಲ್ ಮಸೀದಿಯಲ್ಲಿ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.


ಬೆಳಗ್ಗೆ 8.30ಕ್ಕೆ ಹಿಲಾಲ್ ಮಸೀದಿಯ ಧರ್ಮಗುರು ಸೂಫಿ ದಾರಿಮಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರವಾದಿ ಪೈಗಂಬರ್‌ರ ಜೀವನ ಸಂದೇಶವನ್ನು ಸೂಫಿ ದಾರಿಮಿ ನೀಡಿದರು. ಬಡವರಿಗೆ ನೆರವು ನೀಡಲಾಯಿತು.


ಹಿಲಾಲ್ ಮಸೀದಿಯ ಧರ್ಮಗುರು ಸೂಫಿ ದಾರಿಮಿ ಮಾತನಾಡಿ, ಎಲ್ಲೆಡೆ ಹಬ್ಬವನ್ನು ಆಚರಿಸಲಾಗುತ್ತಿದೆ. ಹಸಿದವನ ನೋವನ್ನು ಅರಿಯಲು, ರಂಜಾನ್ ತಿಂಗಳಲ್ಲಿ ಉಪವಾಸ ಮಾಡಲಾಗುತ್ತದೆ. ಪ್ರತಿಯೊಬ್ಬ ಮುಸಲ್ಮಾನ ಹಬ್ಬದಂದು, ದಾನ ನೀಡುವುದು ಕಡ್ಡಾಯವಾಗಿದೆ. ಅದಕ್ಕಾಗಿ ಈದುಲ್ ಫಿತ್ರ್ ಹಬ್ಬವನ್ನು ದಾನದ ಹಬ್ಬವೆಂದು ಕರೆಯಲಾಗುತ್ತದೆ. ಎಲ್ಲ ಧರ್ಮದವರೂ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಬೇಕು ಎಂದರು.


ಕುಶಾಲನಗರದ ಹಿಲಾಲ್ ಮಸೀದಿ ಕಮಿಟಿ ಅಧ್ಯಕ್ಷ ಹುಸೇನ್ ಮಾತನಾಡಿ, 30 ದಿನಗಳ ಕಠಿಣ ವ್ರತಾಚರಣೆಯ ನಂತರ ಮುಸಲ್ಮಾನರು ಈದುಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಸರ್ವರೂ ಸೌಹಾರ್ದತೆಯಿಂದ ಬದುಕೋಣ ಎಂದರು.


ಹಿಲಾಲ್ ಮಸೀದಿ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಪದಾಧಿಕಾರಿಗಳು ಇದ್ದರು. ಹಿಲಾಲ್ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net