ಪಟ್ಟಣದ ಸ್ವಚ್ಛತೆಗೆ ಕೈ ಜೋಡಿಸಿ

30. HBH. 1
Published on

ಹಗರಿಬೊಮ್ಮನಹಳ್ಳಿ: ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಡಸ್ಟ್‌ಬಿನ್‌ಗಳನ್ನು ವಿತರಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ತಿಳಿಸಿದರು.

ಪಟ್ಟಣದ 1ನೇ ವಾರ್ಡ್‌ನಲ್ಲಿ ಪ್ರತಿ ಮನೆಗೆ ಒಂದು ಜತೆ ಡಸ್ಟ್‌ಬಿನ್ ವಿತರಿಸಿ ಮಂಗಳವಾರ ಮಾತನಾಡಿದರು. ಪ್ರತಿ ಮನೆಗೆ ಎರಡು ಡಸ್ಟ್‌ಬಿನ್ ವಿತರಿಸಲಾಗುತ್ತಿದ್ದು, ಒಂದರಲ್ಲಿ ಒಣಕಸ ಮತ್ತೊಂದರಲ್ಲಿ ಹಸಿ ಕಸ ಹಾಕಬೇಕು. ಕಸವನ್ನು ಚರಂಡಿ, ರಸ್ತೆಗೆ ಎಸೆಯಬಾರದು. ಕಸಕ್ಕೆ ಬೆಂಕಿಯನ್ನೂ ಹಚ್ಚಬಾರದು. ಎರಡು ಡಸ್ಟ್‌ಬಿನ್‌ಗಳಲ್ಲಿ ಕಸ ಹಾಕಿ ಪುರಸಭೆ ತ್ಯಾಜ್ಯ ವಿಲೇವಾರಿ ಸಿಬ್ಬಂದಿಗೆ ನೀಡಬೇಕು. ಇದರಿಂದ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬಹುದು ಎಂದರು.

ಆರ್‌ಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ದಾದಮ್ಮನವರ ಬಸವರಾಜ್, ಪ್ರಮುಖರಾದ ಉಪ್ಪಾರ ಹನುಮಂತಪ್ಪ, ಪುರಸಭೆ ಸಿಬ್ಬಂದಿ ವಿಜಯಲಕ್ಷ್ಮೀ, ಮೇಸ್ತ್ರಿ ಪ್ರಭಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net