

\ಮೂಡಲಗಿ: ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಪಾತ ಮಾಡಬೇಡಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ಪಟ್ಟಣ ಮಾಡುವ ಸಂಕಲ್ಪ ಮಾಡಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಕಲ್ಲೊಳ್ಳಿ ಪಟ್ಟಣ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯ&ಉಪಾಧ್ಯರನ್ನು ಅಭಿನಂದಿಸಿ ಮಾತನಾಡಿದರು. ನಾಗರಿಕರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಂಚಾಯಿತಿ ಶ್ರಮಿಸಬೇಕು. ಕಲ್ಲೊಳ್ಳಿ ಪಟ್ಟಣದ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಸರ್ಕಾರದ ನಾನಾ ಯೋಜನೆಗಳ ಮೂಲಕ ಶ್ರಮಿಸುತ್ತಿದ್ದೇನೆ. ಜನರ ಕಷ್ಟ& ಕಾರ್ಪಣ್ಯಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಸರ್ಕಾರದಿಂದ ಬಹುತೇಕ ಯೋಜನೆ ಜಾರಿಗೊಳಿಸಿದ್ದೇನೆ. ಆದರೀಗ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅನುದಾನವನ್ನೇ ನೀಡುತ್ತಿಲ್ಲ. ಹೀಗಾಗಿ ಹೊಸ ಹೊಸ ಕಾಮಗಾರಿಗಳಿಗೆ ಅನುದಾನದ ಕೊರತೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೂತನ ಅಧ್ಯೆ ಮಾಯವ್ವ ದಾಸನವರ ಮತ್ತು ಉಪಾಧ್ಯೆ ಮೇಘಾ ಖಾನಾಪುರ ಅವರು ಶಾಸಕರನ್ನು ಸತ್ಕರಿಸಿದರು. ಜಿಪಂ ಮಾಜಿ ಅಧ್ಯ ಬಸಗೌಡ ಪಾಟೀಲ, ಈರಪ್ಪ ಹೆಬ್ಬಾಳ, ಪರಪ್ಪ ಕಡಾಡಿ, ಮಲ್ಲಪ್ಪ ಖಾನಾಪುರ, ಬಸವಂತ ದಾಸನವರ, ಬಸವರಾಜ ಯಾದಗೂಡ, ಭೀಮಶೆಪ್ಪ ಗೋರೋಶಿ, ಮಹಾಂತೇಶ ಕಪ್ಪಲಗುದ್ದಿ, ರಾಮಣ್ಣ ದಾಸನಾಳ, ಪರಸಪ್ಪ ಮಕ್ಕಳಗೇರಿ, ರಾಮಣ್ಣ ಕಂಕಣವಾಡಿ, ದತ್ತು ಕಲಾಲ, ಕಲ್ಲಪ್ಪ ಇಟ್ನಾಳ, ಬಸು ಜಗದಾಳ, ಪಪಂ ಸದಸ್ಯರು ಇತರರಿದ್ದರು.