

ಯಳಂದೂರು: ಪಟ್ಟಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧ್ಯಕ್ಷರು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೂಂಡು ಆದಾಯ ಕ್ರೋಡೀಕರಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ತಿಳಿಸಿದರು.
ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರಿ ಸ್ವೀಕರಿಸಿ ಮಾತನಾಡಿದ ಅವರು, ನನೆಗುದ್ದಿಗೆ ಬಿದ್ದಿರುವ ಅಂಗಡಿ, ವಾಣಿಜ್ಯ ಕಟ್ಟಡಗಳು, ಅನಧಿಕೃತ ಬಡಾಣೆಗಳ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಪ.ಪಂ.ಅಧ್ಯಕ್ಷೆ ಪ್ರಭಾವತಿ, ಸದಸ್ಯರಾದ ಕೆ.ಮಲ್ಲಯ್ಯ, ಆರೋಗ್ಯಾಧಿಕಾರಿ ಬಾಲಸುಬ್ರಮಣ್ಯ, ಸಿಬ್ಬಂದಿ ಮಲ್ಲಿಕಾರ್ಜುನ, ಬಸವಣ್ಣ, ಜಯಲಕ್ಷ್ಮೀ, ಲಕ್ಷ್ಮೀ, ರೇಖಾ, ಮಹೇಶ್, ಪರಶಿವಮೂರ್ತಿ, ರಘು ಇತರರು ಇದ್ದರು.