

ಸೈದಾಪುರ: ಸಂವಿಧಾನಾತ್ಮಕ ಅಂಶ, ದೇಶದ ಬಲಿಷ್ಠ ನಾಯಕರ ವ್ಯಕ್ತಿತ್ವ, ಸ್ಥಳೀಯ ನಾಯಕರ ಹೋರಾಟದ ಫಲವಾಗಿ ಹೈದರಾಬಾದ್ ಸಂಸ್ಥಾನ ದೇಶದಲ್ಲಿ ವಿಲೀನಗೊಳ್ಳಲು ಸಾಧ್ಯವಾಯಿತು ಎಂದು ಸಂಪನ್ಮೂಲ ವ್ಯಕ್ತಿ ಲಕ್ಷö್ಮಣ ಪಾಟೀಲ್ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಡಿಎಲ್‌ಇಡಿ ಕಾಲೇಜಿನಲ್ಲಿ ಅಜೀಂ ಪ್ರೇಮಜಿ ಫೌಂಡೇಷನ್‌ನಿAದ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ಸಂವಿಧಾನಿಕ ಆಡಳಿತದ ಮಹತ್ವ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟçದ ಏಕೀಕರಣದಲ್ಲಿ ವಲ್ಲಭಭಾಯಿ ಪಟೇಲ್‌ರ ಅಂದಿನ ಗಟ್ಟಿ ನಿರ್ಧಾರ ಇಂದು ಬಲಿಷ್ಠ ದೇಶವಾಗಲು ಕಾರಣವಾಗಿವೆ. ವಿಮೋಚನೆ ಹಿಂದಿನ ಎಲ್ಲ ಅಂಶಗಳು ಇಂದಿನ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕಿದೆ. ಆ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬದ್ಧರಾಗಬೇಕಿದೆ ಎಂದರು.
ಫೌAಡೇಷನ್‌ನಿAದ ಶಿಕ್ಷಣದ ಕ್ಷೇತ್ರದಲ್ಲಿ ವಿನೂತನ ಕಾರ್ಯ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ತರಬೇತಿ ಶಿಕ್ಷಕರಿಗೆ ಚರ್ಚೆ ಆಯೋಜನೆ ಮಾಡಿ ವಿಮೋಚನೆ ಅಂಶ ತಿಳಿಸಲಾಗಿದ್ದು, ಇದು ಮಕ್ಕಳ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ನೆರವಾಗಲಿದೆ ಎಂದು ಡಿಎಲ್‌ಇಡಿ ಕಾಲೇಜಿನ ಪ್ರಾಚಾರ್ಯ ಕರಬಸಯ್ಯ ದಂಡಿಗಿಮಠ ಹೇಳಿದರು. ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಉಪನ್ಯಾಸಕಿ ಶ್ವೇತಾ ರಾಘವೇಂದ್ರ ಪೂರಿ, ಸಂಪನ್ಮೂಲ ವ್ಯಕ್ತಿ ಮಲ್ಲೇಶ ವಗ್ಗರ, ಸುರೇಶಗೌಡ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.