ಪಟಾಕಿ ಮಾರಾಟ ಸುರಕ್ಷತಾ ಕ್ರಮ ಅನುಸರಿ ಡಿ.ಸಿ ಸಿ.ಸತ್ಯಭಾಮ ಸೂಚನೆ

ಪಟಾಕಿ ಮಾರಾಟ ಸುರಕ್ಷತಾ ಕ್ರಮ ಅನುಸರಿ ಡಿ.ಸಿ ಸಿ.ಸತ್ಯಭಾಮ ಸೂಚನೆ
Published on

ಹಾಸನ: ದೀಪಾವಳಿ ಹಬ್ಬ ಆಚರಣೆ ಸಂಬಂದ ಪಟಾಕಿ ಮಾರಾಟ ಮಾಡುವ ಸ್ಥಳದಲ್ಲಿ ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾರಾಟ ಮಾಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಸೂಚಿಸಿದರು.

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರುಗಡೆ ಇರುವ ಖಾಲಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲು ನಿಗದಿಪಡಿಸಿರುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಪಟಾಕಿ ಅಂಗಡಿಗಳನ್ನು ನಿಗದಿತ ಸ್ಥಳ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ತೆರೆಯುವಂತಿಲ್ಲ ಎಂದು ತಿಳಿಸಿದ ಅವರು, ಪಟಾಕಿ ಮಾರಾಟ ಮಾಡುವವರಿಗೆ ತರಬೇತಿ ನೀಡುವಂತೆ ಆಗ್ನಿ ಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಿದರು. ತಾತ್ಕಾಲಿಕ ಮಳಿಗೆ ನಿರ್ಮಿಸಲು ಬೆಂಕಿಯನ್ನು ತಡೆಗಟ್ಬಹುದಾದ, ಬೆಂಕಿ ಹೊತ್ತಿಕೊಳ್ಳದ ಸಾಧನಗಳನ್ನು ಕಡ್ಡಾಯವಾಗಿ ಉಪಯೋಗಿಸುವಂತೆ ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯ ಭೂಮಿ ಸೇರಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಇದನ್ನು ತಡೆಗಟ್ಟುವ ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದ ಅವರು ಪಟಾಕಿ ಮಾರಾಟ ಮಾಡುವ ಸ್ಥಳದಲ್ಲಿ ಡೇಸ್ಟ್‌ಬಿನ್‌ಗಳನಿಟ್ಟು ತ್ಯಾಜ್ಯ ಶೇಖರಣೆ ಮಾಡುವಂತೆ ತಿಳಿಸಿದರು.

ಆಗ್ನಿ ಶಾಮಕದಳದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪಟಾಕಿ ಮಾರಾಟಗಾರರು ಸಭೆಯಲ್ಲಿ ಹಾರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net