

ಹಾಸನ: ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಬುಧವಾರ ಆರ್‌ಎಸ್‌ಎಸ್‌ನ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಪ್ರೀತಂ ಜೆ. ಗೌಡ, ನಗರಸಭೆ ಅಧ್ಯಕ್ಷ ಮೋಹನ್, ಹುಡಾ ಅಧ್ಯಕ್ಷ ಲಲಾಟಮೂರ್ತಿ, ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮತ್ತಿತರರು ಗಣಪತಿಗೆ ಪೂಜೆ ಸಲ್ಲಿಸಿದ ನಂತರ ಪೌರಕಾರ್ಮಿಕರ ಪಾದ ಪೂಜೆ ಮಾಡಿದರು.
ಶಾಸಕ ಪ್ರೀತಂಗೌಡ ಮಾತನಾಡಿ, 13ನೇ ವರ್ಷದ ಪಾಂಚಜನ್ಯ ಗಣಪತಿಯನ್ನು ಈ ಬಾರಿ ವಿದ್ಯುಕ್ತವಾಗಿ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೊದಲ ಬಾರಿಗೆ ಪಾಂಚಜನ್ಯ ಕಚೇರಿಯಿಂದ ಹೊರಗೆ ಗಣೇಶ ಸ್ಥಾಪನೆ ಆಗಿದೆ. ಸೆ.5 ರಂದು ನಡೆಯುವ ಶೋಭಾಯಾತ್ರೆಯನ್ನು ಇಡೀ ರಾಜ್ಯ ಹಾಸನದತ್ತ ತಿರುಗಿ ನೋಡುವಂತೆ ಮಾಡುವ ನಿಟ್ಟಿನಲ್ಲಿ ಯುವಕರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಪ್ರೊ. ಎಚ್.ಎಲ್. ಮಲ್ಲೇಶಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ಮೊಗಣ್ಣಗೌಡ, ಕಾರ್ಯದರ್ಶಿ ರವಿಸೋಮು, ಸದಸ್ಯ ಐನೆಟ್ ವಿಜಿಕುಮಾರ್, ಆರ್‌ಎಸ್‌ಎಸ್‌ನ ವಿಜಯಕುಮಾರ್, ಬಿಜೆಪಿ ಗ್ರಾಮಾಂತರ ಮಂಡಳಿ ಅಧ್ಯಕ್ಷ ರಂಗನಾಥ್, ರಕ್ಷಿತ್ ಭಾರದ್ವಾಜ್, ಮಣಿಕಂಠ, ಶೋಭನ್ ಬಾಬು, ಎಚ್.ಎನ್. ನಾಗೇಶ್, ಪ್ರೀತಿವರ್ಧನ್, ಮಹಿಪಾಲ್, ಚನ್ನಕೇಶವ ಇತರರು ಉಪಸ್ಥಿತರಿದ್ದರು.