

ಹಾಸನ: ಕಾಡುಗಳು ನಶಿಸಿ ಹೋಗುತ್ತಿರುವುದರಿಂದ ಕೆಲವು ಜಾತಿ ಪಕ್ಷಿಗಳು ಪ್ರಕೃತಿಯಿಂದ ದೂರವಾಗುತ್ತಿವೆ. ಹಾಗಾಗಿ ಮೊದಲು ಕಾಡುಗಳ ರಕ್ಷಣೆಯಾಗಬೇಕು ಇದ್ದರಿಂದ ಪಕ್ಷಿಗಳ ಸಂಕುಲ ಉಳಿಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ರೆಡ್ ಕ್ರಾಸ್ ಭವನದಲ್ಲಿ ಶನಿವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ಹಾಸನದ ಚಿಕ್ಕಲಾ ಫೌಂಡೇಶನ್ ಸಹಯೋಗದಲ್ಲಿ ಪಕ್ಷಿಗಳ ಪಿತಾಮಹ ಡಾ. ಸಲೀಂ ಅಲಿ ಅವರ 127 ಜಯಂತಿ ಅಂಗವಾಗಿ 350 ಕ್ಕೂ ಹೆಚ್ಚು ಪಕ್ಷಿ ಛಾಯಾ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವೀಕ್ಷಸಿ ಮತನಾಡಿದ ಅವರು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಂತಹ ವಿಶೇಷ ಪಕ್ಷಿಗಳ ಛಾಯಾ ಚಿತ್ರಗಳನ್ನು ಆಯೋಜಿಸಲಾಗಿದೆ ಇದೊಂದು ಅತ್ಯುತ್ತಮ ಛಾಯಚಿತ್ರ ಪ್ರದರ್ಶನ ಎಂದ ಅವರು ಮುಂದಿನ ದಿನಗಳಲ್ಲಿ ವೈಯಕ್ತಿಕವಾಗಿ ಸಹಕಾರವನ್ನು ನೀಡಲಾಗುವುದು ಎಂದರು.
ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ರೆಡ್ ಕ್ರಾಸ್ ಜಿಲ್ಲಾ ಅಧ್ಯಕ್ಷ ಹೆಮ್ಮಿಗೆ ಮೋಹನ್ ಹಾಗೂ ಇತರರು ಇದ್ದರು.
ಈ ಪ್ರದರ್ಶನವು ಡಿ.5ರ ವರೆಗೂ ನಡೆಯಲಿದ್ದು, ಪಕ್ಷಿಗಳ ಛಾಯ ಚಿತ್ರ ಪ್ರದರ್ಶನ ಕುರಿತಂತೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ರಸ ಪ್ರಶ್ನೆ ಕಾರ್ಯಕ್ರಮವನ್ನು ಡಿ.10 ರಂದು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.