

ಚಿತ್ರದುರ್ಗ: ಪಕ್ಷಿ ಸಂಕುಲ ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಮಾನವ ಸಂಕುಲವೂ ನಾಶವಾಗುವುದರಲ್ಲಿ ಸಂದೇಹವೇ ಇಲ್ಲವೆಂದು ಡಾನ್‌ಬಾಸ್ಕೋ ಸಂ ಸ್ಥೆ ಮುಖ್ಯಸ್ಥ ಫಾ.ಉದಯಕುಮಾರ್ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ನಗರದ ಡಾನ್‌ಬಾಸ್ಕೋ ಶಾಲೆಯಲ್ಲಿ ಮಂಗಳವಾರ ಪಕ್ಷಿ ಪಿತಾಮಹ ಡಾ.ಸಲೀಂಅಲಿ ಅವರ ಜನ್ಮ ದಿ ನದ ಅಂಗವಾಗಿ ಏರ್ಪಡಿಸಿದ್ದ ‘ಪರಿಸರದಲ್ಲಿ ಪಕ್ಷಿಗಳ ಪಾತ್ರ’ಉಪನ್ಯಾಸ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿ ದ್ಯಾರ್ಥಿಗಳು ಪಕ್ಷಿಗಳ ಬಗ್ಗೆ, ಪರಿಸರದ ಬಗ್ಗೆ ಕಾಳಜಿವಹಿಸ ಬೇಕು. ಸಲೀಂಅಲಿ ಅವರು ದೇಶಾದ್ಯಂತ ಪಕ್ಷಿಗಳ ಸಮೀಕ್ಷೆ ಮಾಡಿದ ಮೊ ದಲ ಭಾರತೀಯ ಎಂದರು.
ಫೌಂಡೇಶನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ,ಪಕ್ಷಿಗಳ ಸಂರಕ್ಷಣೆ ನಿಟ್ಟಿನಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದರು.ವನ್ಯಜೀವಿ ಛಾಯಾಗ್ರಾಹಕ ಎಂ.ಕಾರ್ತೀಕ್ ಉಪನ್ಯಾಸ ನೀಡಿದರು. ಫೌಂಡೇಶನ್ ಕಾರ‌್ಯದರ್ಶಿ ಎಚ್ ಸ್‌ಟಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾನ್‌ಬಾಸ್ಕೋ ಸಂಸ್ಥೆಯ ಫಾ.ಸಜಿ,ಎಚ್.ಮಂಜುನಾಥ್,ಕೆ.ವಿ.ನಾಗಲಿಂಗಾರೆಡ್ಡಿ ಇ ದ್ದರು.