

ಕಲಘಟಗಿ: ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷದವರು ಪಕ್ಷಭೇದ ಮರೆತು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಕೊಠಡಿ ನಿರ್ಮಾಣ ಹಾಗೂ ಎಸ್.ಸಿ. ಕಾಲನಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ವಿವಿಧ ಸಮಾಜಗಳ ಮುಖಂಡರು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಇನ್ನುಳಿದ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
1.20 ಕೋ.ರೂ. ವೆಚ್ಚದಲ್ಲಿ ಹಿರೇಹೊನ್ನಳ್ಳಿ- ಧೂಳಿಕೊಪ್ಪ ರಸ್ತೆ ಸುಧಾರಣೆ, 22 ಲಕ್ಷ ರೂ. ವೆಚ್ಚದಲ್ಲಿ ಸ.ಹಿ.ಪ್ರಾ. ಶಾಲೆ ಕೊಠಡಿ ಹಾಗೂ 15.50 ಲಕ್ಷ ರೂ. ವೆಚ್ಚದಲ್ಲಿ ಸ.ಪ್ರೌ. ಶಾಲೆ ಕೊಠಡಿ ಕಾಮಗಾರಿ ಹಾಗೂ ಉಗ್ಗಿನಕೇರಿ ಗ್ರಾಪಂ ವ್ಯಾಪ್ತಿಯಲ್ಲಿನ 13 ಲಕ್ಷ ರೂ. ವೆಚ್ಚದಲ್ಲಿ ಸ.ಪ್ರೌ. ಶಾಲೆ ಕೊಠಡಿ ಹಾಗೂ 33 ಲಕ್ಷ ರೂ. ವೆಚ್ಚದಲ್ಲಿ ಸ.ಹಿ.ಪ್ರಾ. ಶಾಲೆ ಕೊಠಡಿಗಳ ನಿರ್ವಣ, ಕಲ್ಯಾಣನಗರ ಜನತಾ ಪ್ಲಾಟ್ನ ಎಸ್.ಸಿ. ಕಾಲನಿಯಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ಗಟಾರ ಹಾಗೂ ಮಡಕಿಹೊನ್ನಳ್ಳಿಯಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಜಿಪಂ ಸದಸ್ಯೆ ಈರವ್ವ ದಾಸನಕೊಪ್ಪ, ತಾಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ, ಉಪಾಧ್ಯಕ್ಷ ಚಂದ್ರಗೌಡ, ಬಿ.ಎನ್. ಬಾಗೇವಾಡಿ, ಬಲರಾಮ ಚವ್ಹಾಣ, ಓಲೇಕಾರ,ಬಿಇಒ ಉಮಾದೇವಿ ಬಸಾಪೂರ, ಬಸವರಾಜ ಶೆರೇವಾಡ, ಚಂದ್ರಗೌಡ ಪಾಟೀಲ, ಐ.ಸಿ. ಗೋಕುಲ, ನಿಂಗಪ್ಪ ಸುತಗಟ್ಟಿ, ನರೇಶ ಮಲೆನಾಡ, ಸಹದೇವಪ್ಪ ಧನಿಗೊಂಡ, ಬಸವರಾಜ ಮಾದಿ, ಅಶೋಕ ಗೋಕುಲ ಇತರರಿದ್ದರು.