ಪಕ್ಷದಲ್ಲಿ ವ್ಯತ್ಯಾಸಗಳಿದ್ದರೆ ರಾಜಿಯಾಗೋಣ: ಬಿಜೆಪಿ ಬಲಪಡಿಸಲು ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ

5
Published on

ತುಮಕೂರು: ಪಕ್ಷ ಒಂದು ದೊಡ್ಡ ಹಡಗು ಇದ್ದಂತೆ. ಅದನ್ನು ಹತ್ತಿಕೊಂಡು ತೇಲುತ್ತಾ ನಾವೂ ಕೂಡ ಪಯಣ ಮಾಡಬಹುದು. ಅಂತಹ ಪಕ್ಷವನ್ನು ಮತ್ತೆ ದೊಡ್ಡ ಸಮುದ್ರ ದಾಟುವ ಸ್ಥಿತಿಗೆ ನಾವೆಲ್ಲಾ ಒಗ್ಗೂಡಿ ತೆಗೆದುಕೊಂಡು ಹೋಗೋಣ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ತುಮಕೂರು ಜಿಲ್ಲಾ ಟಕದ ನೂತನ ಅಧ್ಯಕ್ಷ ಎಚ್​.ಎಸ್​.ರವಿಶಂಕರ್​ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಮ್ಮಲ್ಲಿನ ವ್ಯತ್ಯಾಸಗಳು ಏನೇ ಇರಲಿ, ಸ್ವಲ್ಪಮಟ್ಟಿಗೆ ರಾಜೀ ಮಾಡಿಕೊಂಡು ನಾವೆಲ್ಲಾ ಪಕ್ಷ ಸಂಟನೆಗೆ ಒತ್ತು ಕೊಟ್ಟಿದ್ದೇ ಆದಲ್ಲಿ ಚುನಾವಣೆ ಗೆಲ್ಲುವುದು ಸವಾಲಿನ ಕೆಲಸವೇನಲ್ಲ ಎಂದರು.

ಪಗಳು ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರಿಗೆ ಭ್ರಮನಿರಸನವಾಗುವುದು ಸಹಜ. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಪ ಮತ್ತೆ ಅಧಿಕಾರಕ್ಕೆ ಬಂದರೆ ಇನ್ನಷ್ಟು ಕಾರ್ಯಕರ್ತರಿಗೆ ಒಳಿತಾಗಲಿದೆ. ಸಂಟನೆ ಹಾಗೂ ಸರ್ಕಾರ ಪರಸ್ಪರ ಜೋಡಣೆ ಆದರೆ ಮುಂದಿನ ಹೋರಾಟದ ಹಾದಿ ಸುಗಮವಾಗಲಿದೆ ಎಂದರು.

ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಇದೆ. ಜಿಪಂ, ತಾಪಂ, ವಿಧಾನಸಭೆ, ಲೋಕಸಭಾ ಚುನಾವಣೆಗಳಿವೆ. ಸರ್ಕಾರ ಮಾಡಿರುವ ಕೆಲಸಗಳನ್ನು ಜನರ ಮುಂದೆ ಪ್ರಚಾರ ಮಾಡಬೇಕು. ಸರ್ಕಾರದ ಬಗ್ಗೆ ನೆಗೆಟಿವ್​ ಪ್ರಚಾರವೇ ಹೆಚ್ಚಾಗಿದೆ. ಹಾಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಒಟ್ಟಿಗೆ ಹೋರಾಡೋಣ: ಪಕ್ಕಿಂತ ಯಾರೂ ದೊಡ್ಡವರಲ್ಲ. ಎಲ್ಲರೂ ಕಾರ್ಯಕರ್ತರೇ. ನಾನು ಕಾಂಗ್ರೆಸ್​ ಜಿಲ್ಲಾಧ್ಯನಾಗಿದ್ದಾಗ 13ಕ್ಕೆ 13 ಸ್ಥಾನ ಗೆದ್ದಿದ್ದೆ. ಒಗ್ಗಟ್ಟಿನಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಸಂಸದ ಜಿ.ಎಸ್​.ಬಸವರಾಜು ಹೇಳಿದರು.

ರವಿಶಂಕರ್​ ಅಪಾರ ಅನುಭವ ಹೊಂದಿದ್ದು ಅವರ ನಡೆ&ನುಡಿ ಉತ್ತಮವಾಗಿದೆ. ಪಕ್ಷ ಸಂಟನೆಗೆ ಅವರ ಶಕ್ತಿ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಒಟ್ಟಿಗೆ ಹೋರಾಡೋಣ ಎಂದರು.

ಶಾಸಕರಾದ ಬಿ.ಜಿ.ಜ್ಯೋತಿಗಣೇಶ್​, ಮಸಾಲಾ ಜಯರಾಂ, ಡಾ.ಸಿ.ಎಂ.ರಾಜೇಶಗೌಡ, ವಿಧಾನಪರಿಷತ್​ ಸದಸ್ಯ ಚಿದಾನಂದ ಎಂ.ಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್​, ರಾಜ್ಯ ಕಾರ್ಯದರ್ಶಿ ವಿನಯ್​ ಬಿದಿರೆ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್​.ಶಿವಪ್ರಸಾದ್​, ವಿಧಾನ ಪರಿಷತ್​ ಮಾಜಿ ಸದಸ್ಯ ಡಾ.ಎಂ.ಆರ್​.ಹುಲಿನಾಯ್ಕರ್​, ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಉಪಾಧ್ಯಕ್ಷ ವೈ.ಎಚ್​.ಹುಚ್ಚಯ್ಯ, ಮೇಯರ್​ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಿ.ಎಸ್​.ನಾಗೇಶ್​ ಡಿ.ಕೃಷ್ಣಕುಮಾರ್​, ಟಿ.ಎಚ್​.ಹನುಮಂತರಾಜು, ಬ್ಯಾಟರಂಗೇಗೌಡ, ಯುವ ಮೋರ್ಚಾ ಅಧ್ಯಕ್ಷ ಟಿ.ವೈ.ಯಶಸ್​, ಸಂಪಿಗೆ ಶ್ರೀಧರ್​, ಬೈರಪ್ಪ ಇದ್ದರು.

ಸಂಟನೆಯು ಹೋರಾಟದಲ್ಲಿ ಪರಿಸಮಾಪ್ತಿ ಆಗಬೇಕು. ಯುದ್ಧ ಕಾಲದಲ್ಲಿ ಶಸಾಭ್ಯಾಸ ಮಾಡುವ ಬದಲು ಈಗಲೇ ನಾವೆಲ್ಲಾ ಪರೀೆಗೆ ಅನುವಾಗಬೇಕು. ಯಾವಾಗ ಬೇಕಾದರೂ ಪರೀೆ ಬರಬಹುದು. ಯಶಸ್ಸು ಸಿಗಬೇಕಾದರೆ ನನ್ನದು ಅನ್ನುವ ಭಾವನೆಯನ್ನು ಸಂಟನೆಯಲ್ಲಿರುವ ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು. ಸ್ಥಿರವಾಗಿ ಆಡಳಿತ ಪವನ್ನಾಗಿ ನಿಲ್ಲಿಸೋಣ. ಸಂಟನೆ, ಸರ್ಕಾರಕ್ಕೆ ಶಕ್ತಿ ಬರಲಿ. ಮಾಧುಸ್ವಾಮಿ, ಸಚಿವ

ರಣಕಹಳೆ ಊದೋಣ.. ಇನ್ನೊಂದು ವರ್ಷದಲ್ಲಿ ಮಹತ್ವದ ಚುನಾವಣೆ ಬರಲಿದ್ದು, ರಣಕಹಳೆ ಊದಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ದಾವಣಗೆರೆ ವಿಭಾಗ ಉಸ್ತುವಾರಿ ಕೆ.ಎಸ್​.ನವೀನ್​ ಹೇಳಿದರು. ಬಿಜೆಪಿಗೆ ಮಹತ್ವವಾದ ಜಿಲ್ಲೆ ತುಮಕೂರು. ರವಿಶಂಕರ್​ ಅಧ್ಯರಾಗಿ ಸಾರಥ್ಯ ವಹಿಸುತ್ತಾರೆ. ಅವರ ಹೆಗಲಿಗೆ ಹೆಗಲು ಕೊಟ್ಟು ಪವನ್ನು ಗೆಲ್ಲಿಸುವುದು ಎಲ್ಲರ ಜವಾಬ್ದಾರಿ. ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲಗಳಿವೆ. ನಮ್ಮ ಪಕ್ಷದವರು ನಮ್ಮವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಕಾಂಗ್ರೆಸ್​ ಠೇವಣಿ ಕಳೆಯುವುದರ ಬಗ್ಗೆ ಚಿಂತನೆ ಮಾಡಬೇಕು. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಭಿನ್ನಾಭಿಪ್ರಾಯವೂ ಇಲ್ಲ. 7 ೇತ್ರ ಗೆಲ್ಲುವ ಸಂಕಲ್ಪ ಮಾಡಬೇಕಿದೆ ಎಂದರು.

ಸಮರ್ಥರಿಗೆ ಪಕ್ಷದ ಜವಾಬ್ದಾರಿ: ನಮಗಿಂತ ಶಕ್ತಿವಂತರನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ಕೊಟ್ಟಾಗ ನಾವು ಅದನ್ನು ಸಹಿಸಿಕೊಳ್ಳಬೇಕು. ಕಳೆದೊಂದು ವರ್ಷದಲ್ಲಿ ಮೂರನೇ ಜಿಲ್ಲಾಧ್ಯಕ್ಷರನ್ನು ಕಾಣುತ್ತಿದ್ದೇವೆ. ಪ್ರಯೋಗಗಳನ್ನು ಮಾಡ್ತಾ ಇದ್ದೀವಿ. ಸಮರ್ಥರನ್ನು ಹುಡುಕಿ ಅವರ ಹೆಗಲಿಗೆ ಜವಾಬ್ದಾರಿ ವಹಿಸಬೇಕಿದೆ. ಆ ಕಾರಣಕ್ಕೆ ಮಾಡಲಾಗುತ್ತಿರುವ ಪ್ರಯೋಗಗಳನ್ನು ಪದ ಹಿತದೃಷ್ಟಿಯಿಂದ ನಾವೆಲ್ಲಾ ಒಪ್ಪಿಕೊಳ್ಳಬೇಕು. ರವಿಶಂಕರ್​ ಸಂಟನೆಯಲ್ಲಿ ಸಾಕಷ್ಟು ಅನುಭವ ಇರುವವರು. ಅವರ ಅನುಭವ, ಶಕ್ತಿಯನ್ನು ಪಕ್ಷ ಬಳಸಿಕೊಳ್ಳಬೇಕಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಶಕ್ತಿಮೀರಿ ಕೆಲಸ ಮಾಡುವೆ: ಜಿಲ್ಲೆಯಲ್ಲಿ ಕಾ.ಬೋರಪ್ಪ, ಎಸ್​.ಮಲ್ಲಿಕಾರ್ಜುನಯ್ಯ, ಸೊಗಡು ಶಿವಣ್ಣ ಸೇರಿ ಹಲವು ಮುಖಂಡರ ಪರಿಶ್ರಮದಿಂದ ಕಟ್ಟಿದ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಸಮರ್ಥವಾಗಿ ನಿಭಾಯಿಸಿ, ಪಕ್ಷವನ್ನು ಮುನ್ನಡೆಸಲು ಸಿದ್ಧನಿದ್ದೇನೆ. ಜಿಲ್ಲೆಯ 7 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶಕ್ತಿಮೀರಿ ಶ್ರಮಿಸುವುದಾಗಿ ನೂತನ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ (ರವಿಹೆಬ್ಬಾಕ) ಹೇಳಿದರು.

ಸೊಗಡು, ಸುರೇಶ್​ಗೌಡ ಗೈರು: ರವಿಶಂಕರ್​ ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಸೊಗಡುಶಿವಣ್ಣ, ಮಾಜಿ ಶಾಸಕ ಬಿ.ಸುರೇಶಗೌಡ ಗೈರು ಎದ್ದುಕಾಣುತ್ತಿತ್ತು. ಪದಗ್ರಹಣ ಹಿನ್ನೆಲೆಯಲ್ಲಿ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಬೆಳಗಿನಿಂದ ಸಂಜೆವರೆಗೆ ಪಕ್ಷದ ಕಾರ್ಯಕರ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net