ಪಕ್ಷದ ಗೆಲುವಿಗೆ ಸಿಎಂ ಸೂಚಿಸಿದ್ದಾರೆ

ctd bnc--003
Published on

ಚಿತ್ರದುರ್ಗ:ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದ ರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ಚುನಾವಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ಗೆಲುವಿಗೆ ಶ್ರಮಿಸು ವಂತೆ ಸಿಎಂ ನಗರಕ್ಕೆ ಭೇಟಿ ನೀಡಿದ್ದಾಗ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ. ಅವರ ಈ ಸೂಚನೆಯನ್ನು ಭಿನ್ನಮತ ಎನ್ನಲಾಗದು. ಅವರು ಜಿಲ್ಲೆಗೆ ಭೇಟಿ ನೀಡುವ ಮೂಲಕ ಜಿಲ್ಲೆಯ ಪಕ್ಷದ ಶಾಸಕರನ್ನು ಪ್ರೋತ್ಸಾಹಿಸಿದ್ದಾರೆ. ಚುನಾವಣಾ ಪ್ರಚಾರ ವ್ಯವಸ್ಥಿತ ಕಾರ‌್ಯಾರಂಭವಾಗಿದೆ. ಚಿತ್ರ ದುರ್ಗ ನನ್ನ ಪತ್ನಿಯ ತವರು. ಈ ವಿಚಾರವನ್ನು ನಾನು ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ. ಚಿತ್ರದುರ್ಗಕ್ಕೂ ಚಂದ್ರಪ್ಪರಿಗೂ ಏನು ಸಂಬಂಧ ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net