ಪಕ್ಕೆಲುಬಿನ ನಂತರ ಪುಳಿಯೊಗರೆ ಆವಾಂತರ ಸೃಷ್ಟಿಸಿದ ದೈಹಿಕ ಶಿಕ್ಷಕ, ಪ್ರಯೋಜನಕ್ಕೆ ಬಾರದ ಶಿಕ್ಷಣ ಸಚಿವರ ಎಚ್ಚರಿಕೆ

Published on

ಸಕಲೇಶಪುರ: ಪಕ್ಕೆಲುಬು ಎಂದು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ವೈರಲ್ ಮಾಡಿದ್ದ ಶಿಕ್ಷಕನ ವಿರುದ್ಧ ಎದ್ದಿದ್ದ ಆಕ್ರೋಶ ತಣ್ಣಗಾಗುವ ಮುನ್ನವೇ ತಾಲೂಕಿನಲ್ಲೊಬ್ಬ ಶಿಕ್ಷಕ ಪುಳಿಯೊಗರೆ ವಿವಾದ ಸೃಷ್ಟಿಸಿದ್ದಾರೆ.

ಕಬ್ಬಿನಗದ್ದೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಯ ಒಂದನೇ ತರಗತಿ ವಿದ್ಯಾರ್ಥಿನಿಯಿಂದ ಪುಳಿಯೋಗರೆ ಎಂದು ಹೇಳಿಸುವ ಶಾಲೆಯ ದೈಹಿಕ ಶಿಕ್ಷಕ ನಿರ್ವಾಣಯ್ಯ ಬಾಲಕಿಯ ತಪ್ಪು ಉಚ್ಚಾರಣೆ ಯನ್ನು ಉಳಿದ ವಿದ್ಯಾರ್ಥಿಗಳು ಅಣಕಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net