ಪಕ್ಕದ ಮನೆ ಹಸು ಕದ್ದು ಸಂತೆಯಲ್ಲಿ ಮಾರಿಬಂದ!

31 12
Published on

ಏನೂ ಅರಿಯದವನಂತೆ ಮಲಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಹುಲಿಯೂರುದುರ್ಗ: ಪಕ್ಕದ ಮನೆಯ ಹಸುಗಳನ್ನು ಕಳ್ಳತನ ಮಾಡಿ ರಾತ್ರೋರಾತ್ರಿ ಸಂತೆಗೆ ತೆರಳಿ ಮಾರಾಟ ಮಾಡಿಬಂದು ಏನೂ ತಿಳಿಯದವನಂತೆ ಮನೆಯಲ್ಲಿ ಮಲಗಿದ್ದ ಆರೋಪಿಯನ್ನು ಪೊಲೀಸರ ಬಂಧಿಸಿದ್ದಾರೆ.

ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕಂಪ್ಲಾಪುರದ ಪುಟ್ಟರಾಜು ಬಂಧಿತ. ಅದೇ ಗ್ರಾಮದ ಚನ್ನೇಗೌಡ ಅವರ ಒಂದು ಜತೆ ದನಗಳನ್ನು ಭಾನುವಾರ ರಾತ್ರಿ ಕಳ್ಳತನ ಮಾಡಲಾಗಿತ್ತು. ಮಧ್ಯರಾತ್ರಿ ಕೊಟ್ಟಿಗೆ ಗಮನಿಸಿದ ಚನ್ನೇಗೌಡ ದನಗಳು ಇಲ್ಲದ್ದನ್ನು ಕಂಡು ಅಕ್ಕ ಪಕ್ಕದ ಮನೆಯಯವರಿಗೆ ಮಾಹಿತಿ ತಿಳಿಸಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಸುತ್ತಮುತ್ತ ನಡೆಯುವ ದನಗಳ ಸಂತೆಗೆ ತೆರಳಿ ಹುಡುಕಾಟ ನಡೆಸಿದ್ದು. ಈ ವೇಳೆ ಗುಬ್ಬಿ ತಾಲೂಕಿನ ಕೆ.ಜಿ. ಟೆಂಪಲ್​ ಬಳಿಯ ದನಗಳ ಸಂತೆಯಲ್ಲಿ ಸೋಮವಾರ ಬೆಳಗ್ಗೆ ದನಗಳು ಪತ್ತೆಯಾದವು. 43 ಸಾವಿರಕ್ಕೆ ಖರೀದಿ ಮಾಡಿದ್ದಾಗಿ ಮಾಲೀಕರು ತಿಳಿಸಿದ್ದಾರೆ. ಖರೀದಿಸುವುದಕ್ಕೂ ಮೊದಲು ಖರೀದಿದಾರ, ದನಗಳನ್ನು ತಂದಿದ್ದ ವ್ಯಕ್ತಿಯ ೋಟೋ ತೆಗೆದುಕೊಂಡಿದ್ದ. ಇತ್ತ ದನಗಳ ಮಾಲೀಕ ಚನ್ನೇಗೌಡ ಈ ಬಗ್ಗೆ ವಿಚಾರಿಸಿದಾಗ ೋಟೋ ತೊರಿಸಿದ್ದರು. ಇದರಿಂದ ಕಳ್ಳ ಯಾರೆಂದು ಸುಲಭವಾಗಿ ಸಿಕ್ಕಿಬಿದ್ದಿದ್ದ.

ಮನೆಯಲ್ಲಿ ಮಲಗಿದ್ದ ಆರೋಪಿ: ಕಂಪ್ಲಾಪುರದ ಪುಟ್ಟರಾಜು ಕದ್ದ ಹಸುಗಳನ್ನು ಸಂತೆಯಲ್ಲಿ ಮಾರಾಟ ಮಾಡಿದ ಬಳಿಕ ಮನೆಗೆ ಬಂದು ಏನೂ ತಿಳಿಯದವನಂತೆ ಮಲಗಿದ್ದ. ಪೊಲೀಸರು ಖದೀಮ ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್​ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳತನ

ಮಾಡಿದ್ದ ದನಗಳನ್ನು ಚನ್ನೇಗೌಡರಿಗೆ ಹಿಂತಿರುಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net