

ಸಾಗರ: ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದಿಂದ ಸಾಗರ ಉಪವಿಭಾಗಾಕಾರಿ ಕಚೇರಿ ಎದುರು ಅಣುಕು ಶವಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಯೋಜನೆ ಕೈಬಿಡುವಂತೆ ಆಗ್ರಹಿಸುವ ಹಕ್ಕೋತ್ತಾಯಕ್ಕೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಸಹಿ ಹಾಕಿ ಪ್ರತಿಭಟನೆಗೆ ಚಾಲನೆ ನೀಡಿದರು.
ಶರಾವತಿ ಪಂಪ್ಡ್ೃ ಸ್ಟೋರೇಜ್ ಅತ್ಯಂತ ಅವೈಜ್ಞಾನಿಕ ಹಾಗೂ ಪರಿಸರಕ್ಕೆ ಮಾರಕ ಯೋಜನೆ. ಮಲೆನಾಡಿಗರ ಮೇಲೆ ಪದೇ ಪದೆ ಅವೈಜ್ಞಾನಿಕ ಯೋಜನೆ ಹೇರುವ ಕೆಲಸ ಆಗುತ್ತಿದ್ದು, ಶರಾವತಿ ನದಿ ನೀರಿನ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ತಕ್ಷಣ ಶರಾವತಿ ಪಂಪ್ಡ್ೃ ಸ್ಟೋರೆಜ್ ಯೋಜನೆ ನಿಲ್ಲಿಸಬೇಕು. ಈ ಯೋಜನೆ ಅನುಷ್ಠಾನವಾಗಲು ಬಿಡುವುದಿಲ್ಲ. ಪಶ್ಚಿಮ ಘಟ್ಟದ ಶ್ರೇಣಿಯನ್ನು ಸಂಪೂರ್ಣ ಹಾಳು ಮಾಡುವ ಯೋಜನೆ ಯಾವುದೇ ಕಾರಣಕ್ಕೂ ಕಾರ್ಯರೂಪಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಯೋಜನೆ ಕುರಿತು ಕೆಪಿಸಿಎಲ್ ಮಾಹಿತಿ ಕೊಡುತ್ತಿಲ್ಲ. ಯೋಜನೆ ಕಾರ್ಯಾರಂಭಕ್ಕೆ ಮೊದಲೆ ಹಣ ಬಿಡುಗಡೆ ಮಾಡಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಕುರಿತು ಆಸಕ್ತಿ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಹೊನ್ನಾವರ ಶಾಸಕರು ಯೋಜನೆ ವಿರೋಸಿದರೆ, ಸಾಗರ ಶಾಸಕರು ವಿಧಾನಸೌಧದಲ್ಲಿ ಯೋಜನೆ ಪರ ಮಾತನಾಡಿರುವುದು ಅವರ ಪರಿಸರ ವಿರೋ ಮನಸ್ಥಿತಿಗೆ ಸಾಕ್ಷಿ. ರಾಜ್ಯ ಸರ್ಕಾರ ಯೋಜನೆ ಕೈಬಿಟ್ಟು ಪರಿಸರ ಉಳಿಸುವ ಬಗ್ಗೆ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
ಅಖಿಲೇಶ್ ಚಿಪ್ಳಿ ಮಾತನಾಡಿ, ಯೋಜನೆ ಕೈಬಿಡದಿದ್ದರೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಮಲೆನಾಡು ಭಾಗವನ್ನು ಒಳಗೊಂಡ ಪ್ರತ್ಯೇಕ ರಾಜ್ಯದ ಬೇಡಿಕೆ ಇರಿಸುವುದು ಅನಿವಾರ್ಯ ಎಂದರು. ಪ್ರತಿಭಟನೆಯಲ್ಲಿ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಭದ್ರೇಶ್ ಬಾಳಗೋಡು, ಕುಮಾರ ಗೌಡ, ಶಿವು ಆಲಳ್ಳಿ, ದೇವರಾಜ್, ರಾಮಚಂದ್ರ, ರಾಜು, ಶ್ರೀಕರ ಹೊಸನಗರ, ಎಸ್.ವಿ.ಹಿತಕರ ಜೈನ್ ಇತರರಿದ್ದರು.
ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಕೈಬಿಡುವವರೆಗೆ ರೈತ ಸಂಘ ನಿರಂತರ ಹೋರಾಟ ನಡೆಸಲಿದೆ. ಯೋಜನೆ ಅನಾನುಕೂಲತೆ ಬಗ್ಗೆ ರೈತ ಸಂಘದ ಪ್ರಮುಖರು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡುವರು. ಅ.4ರಿಂದ 15ರವರೆಗೆ ನಿರಂತರ ಹೋರಾಟ ನಡೆಯಲಿದೆ. ರಾಜ್ಯದ ಪ್ರಮುಖ ರೈತ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರಯ.
ದಿನೇಶ್ ಶಿರವಾಳ, ರೈತ ಸಂಘದ ಜಿಲ್ಲಾಧ್ಯಕ್ಷ