ಪಂಪೌಸ್ ಬಂದ್ ಮಾಡಿ ಸಿಬ್ಬಂದಿ ಪ್ರತಿಭಟನೆ. ನಗರಕ್ಕೆ ನೀರು ಸರಬರಾಜು ಸ್ಥಗಿತ

1
Published on

ಗದಗ:

ವೇತನ ಬಿಡುಗಡೆ ಮಾಡದ ಹಿನ್ನೆಲೆ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಪಂಪಹೌಸ್ ಸ್ಥಗೀತಗೊಳಿಸಿ ವಾಲ್ ಮೆನ್ ಗಳು, ಸಿಬ್ಬಂದಿಗಳು ಪ್ರತಿಭಟನೆ ಮಾಡಿದ ಘಟನೆ ಗದಗ ತಾಲೂಕಿನ ಪಾಪನಾಶಿ ಪಂಪೌಸ್ ಬಳಿ ಮಂಗಳವಾರ ನಡೆದಿದೆ.

ಕಳೆದ ಐದು ತಿಂಗಳಿಂದ ವೇತನ ನೀಡದಿದಕ್ಕೆ ಪಂಪಹೌಸ್ ಬಂದ್ ಮಾಡಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹಮ್ಮಿಗಿ, ಡಂಬಳ, ಪಾಪನಾಶಿ ಪಂಪಹೌಸ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ವೇತನ ಬಿಡುಗಡೆಗೆ ಆಗ್ರಹಿಸಿದರು. ಈ ಹಿನ್ನೆಲೆ ಅವಳಿ ನಗರದ 35 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತು.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ನಿಂದ ಅವಳಿ ನಗರದಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಗದಗ ವರೆಗೂ ಮೂರು ಪಂಪೌಸ್ ಗಳಿವೆ. ಈ ಪಂಪೌಸ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ.

ನೀರು ಪೂರೈಕೆ ಮಾಡುವ ಗುತ್ತಿಗೆದಾರರಿಗೆ ನಗರಸಭೆ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ ಗುತ್ತಿಗೆದಾರ ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಿಲ್ಲ. ಈ ಹಿನ್ನೆಲೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಈಗಾಗಲೇ ನಗರದಲ್ಲಿ 10 ರಿಂದ 15 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಹೋರಾಟದಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net