ಪಂಪಾಪತಿ-ಹಂಪಮ್ಮ ವಿವಾಹ ಮಹೋತ್ಸವ

10 KAMPLI 01
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 35;
Published on

ಕಂಪ್ಲಿ: ಪಟ್ಟಣದಲ್ಲಿ ತುಂಗಭದ್ರಾ ನದಿ ತೀರದಲ್ಲಿರುವ ಕೋಟೆ ಪಂಪಾಪತಿ ದೇವಸ್ಥಾನದಲ್ಲಿ ಪಂಪಾಪತಿ ಮತ್ತು ಹಂಪಮ್ಮ ರಥೋತ್ಸವ ನಿಮಿತ್ತ ಸೋಮವಾರ ವಿವಾಹ ಮಹೋತ್ಸವ ಕಾರ್ಯಕ್ರಮ ಶ್ರದ್ಧಾ ಭಕ್ತಿಗಳಿಂದ ನಡೆದವು.

ಹಿರೇಮಠ ಶಿವಕುಮಾರ ಶಾಸ್ತ್ರಿ ಹಾಗೂ ಅರ್ಚಕ ಪಿ.ಶರಣಬಸವಸ್ವಾಮಿ ಪೌರೋಹಿತ್ಯದಲ್ಲಿ ಕಲಶಾರೋಹಣ, ಕಂಕಣಧಾರಣೆ, ಪಂಪಾಪತಿ ಹಂಪಮ್ಮ ಕಲ್ಯಾಣೋತ್ಸವ, ಮಹಾರುದ್ರಾಭಿಷೇಕ, ಅನ್ನಸಂತರ್ಪಣೆ ನಡೆದವು. ಕಲಶಾರೋಹಣವನ್ನು ಮಣ್ಣೂರು ರವೀಂದ್ರ, ವಧುವಿನ ಪರವಾಗಿ ಹಳ್ಳಿ ಸಿದ್ದೇಶ, ವರ ಪಂಪಾಪತಿ ಪರವಾಗಿ ಸಗರದ ವಿಜಯೇಂದ್ರ ಪೂಜೆ ನೆರವೇರಿಸಿದರು.

ಪಂಪಾಪತಿ, ಹಂಪಮ್ಮ ದೇವರ ಪ್ರತಿಮೆಗಳನ್ನು ಬೆಳ್ಳಿ ಮುಖವಾಡ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪಂಪಾಪತಿ ಸೇವಾ ಸಮಿತಿ ಮತ್ತು ಸದ್ಭಕ್ತ ಮಂಡಳಿ ಸದಸ್ಯರು, ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net