ಪಂಡಿತ್ ಪುಟ್ಟರಾಜ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ

Puttaraja Gavayi
Published on

ಮೈಸೂರು: ಗದಗಿನ ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ ನೀಡುವ ಪಂಡಿತ್ ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ 2021-22 ಮತ್ತು 2022-23ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಯು 5,000 ರೂ. ನಗದು, ಸ್ಮರಣಿಕೆ, ಪ್ರಶಸ್ತಿಪತ್ರ ಒಳಗೊಂಡಿದೆ. ಅಕ್ಟೋಬರ್ 1ರಂದು ಬೆಳಗಾವಿಯಲ್ಲಿ ನಡೆಯುವ ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸೇವಾ ಸಮಿತಿಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಬ. ಹಾವಣ್ಣನವರ ತಿಳಿಸಿದ್ದಾರೆ.

ಪ್ರಶಸ್ತಿಗೆ ಸಮೀಪದ ಪ್ರತಿಸ್ಪರ್ಧಿಯಾದ ವಿವಿಧ ಪ್ರಕಾರದ 10 ಕೃತಿಗಳನ್ನು ಗುರುತಿಸಿ ‘ವರ್ಷದ ಶ್ರೇಷ್ಠ ಕೃತಿ’ ಸಮ್ಮಾನ ನೀಡಿ ಗೌರವಿಸಲಾಗುವುದು. ಆಸಕ್ತ ಲೇಖಕರು 3 ಕೃತಿಗಳೊಂದಿಗೆ ಪರಿಚಯ ಪತ್ರ, ಒಂದು ಭಾವಚಿತ್ರ, ಮರು ಉತ್ತರಕ್ಕಾಗಿ ಅಗತ್ಯ ಅಂಚೆ ಚೀಟಿ ಅಂಟಿಸಿದ ಲಕೋಟೆ ಸಹಿತ ಆಗಸ್ಟ್ 15ರ ಒಳಗಾಗಿ ತಲುಪುವಂತೆ ಈ ವಿಳಾಸಕ್ಕೆ ಕಳುಹಿಸಬಹುದು.
ವಿಳಾಸ: ಅಧ್ಯಕ್ಷರು, ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ರಿ), ಗಿರಿಜಾ ನಿವಾಸ, ಪಂಚಾಕ್ಷರಿನಗರ, 3ನೇ ಅಡ್ಡರಸ್ತೆ, ಗದಗ-582101.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net