

ಧಾರವಾಡ: ನಗರದ ಅಖಂಡ ಭಾರತ ನಿರ್ಮಾಣ ಸಮಿತಿ ವತಿಯಿಂದ ‘ವಿಭಜನ ಸ್ಮತಿ ದಿವಸ್’ ಹೆಸರಿನಲ್ಲಿ ಆ. 14ರಂದು ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆ ಹಾಗೂ ವೀರರ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.
ನಗರದ ಸುಭಾಷ ರಸ್ತೆಯ ಬಿಜೆಪಿ ಕಚೇರಿಯಿಂದ ಪಂಜಿನ ಮೆರವಣಿಗೆ ಆರಂಭವಾಗಲಿದ್ದು, ವಿವೇಕಾನಂದ ವೃತ್ತ, ಸಿಬಿಟಿ, ಹಳೇ ಬಸ್ ನಿಲ್ದಾಣ, ಟಿಕಾರೆ ರಸ್ತೆ ಮಾರ್ಗವಾಗಿ ಗೋಪಾಕೃಷ್ಣ ಮಂಗಲ ಕಾರ್ಯಾಲಯ ಬಳಿ ಸಂಪನ್ನಗೊಳ್ಳಲಿದೆ. ಮುಖ್ಯ ವಕ್ತಾರರಾಗಿ ಯೋಗ ಪಟು ವಿನಾಯಕ ತಲೆಗೇರಿ ಆಗಮಿಸುವರು. ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಮೃತ ದೇಸಾಯಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.