

ಕಿಕ್ಕೇರಿ: ಕಣ್ಣು ಬಲುಮುಖ್ಯವಾದ ಅಂಗವಾಗಿದ್ದು, ಇದರ ಆರೈಕೆಗೆ ಸದಾ ಮುಂದಾಗಬೇಕು ಎಂದು ಚನ್ನರಾಯಪಟ್ಟಣದ ಶಿವನೇತ್ರ ಚಿಕಿತ್ಸಾಲಯ ಶಾಖಾ ವ್ಯವಸ್ಥಾಪಕ ಜಿ.ಎನ್. ಮಂಜುನಾಥ್ ತಿಳಿಸಿದರು.
ಪಟ್ಟಣದಲ್ಲಿ ಶಿವನೇತ್ರ ಚಿಕಿತ್ಸಾಲಯ ವತಿಯಿಂದ ಚನ್ನನಕೊಪ್ಪಲು ಬಡಾವಣೆಯಲ್ಲಿನ ನಂಜುಂಡೇಶ್ವರ ವಿದ್ಯಾ ಸಂಸ್ಥೆಯ ವಿನಯ್ ಕಾನ್ವೆಂಟ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಪಂಚೇಂದ್ರಿಯಗಳಲ್ಲಿ ಕಣ್ಣು ಶ್ರೇಷ್ಠ ಅಂಗವಾಗಿದ್ದು, ಸಣ್ಣ ಸಮಸ್ಯೆ ಕಾಡಿದರೂ ಉದಾಸೀನ ಮಾಡದಿರಿ. ಸ್ವಯಂ ಚಿಕಿತ್ಸೆ ಮಾಡಿಕೊಂಡು ಶಾಶ್ವತ ಅಂಧತ್ವ ಮಾಡಿಕೊಳ್ಳದಿರಿ ಎಂದು ಸಲಹೆ ನೀಡಿದರು.
ಶಾಲಾ ಮಕ್ಕಳು ಸೇರಿದಂತೆ ವಿವಿಧ ವಯೋಮಾನದ ಸುಮಾರು 150ಕ್ಕೂ ಹೆಚ್ಚು ಮಂದಿ ನೇತ್ರ ತಪಾಸಣೆ ಮಾಡಿಸಿಕೊಂಡರು. ಬಿಜೆಪಿ ಮುಖಂಡ ಕೆ.ಎಸ್. ಪ್ರಭಾಕರ್, ಸಂಸ್ಥೆಯ ಅಧ್ಯಕ್ಷೆ ಭಾಗ್ಯಮ್ಮ, ಕಾರ್ಯದರ್ಶಿ ವಿನುತಾ, ವ್ಯವಸ್ಥಾಪಕ ಶ್ರೀಕಾಂತ್, ಶಿಕ್ಷಕರಾದ ಸಂಧ್ಯಾ, ಶಕುಂತಲಾ, ಹಂಸಲೇಖಾ, ರುಚಿತಾ, ಇಂದ್ರಾ, ಗ್ರಾಪಂ. ಸದಸ್ಯರಾದ ಚಂದ್ರಶೇಖರ್, ಕೆ.ಜಿ.ಪುಟ್ಟರಾಜು, ಮುಖಂಡರಾದ ಅನಂತ, ದೇವರಾಜು, ಸಿಬ್ಬಂದಿ ಮಂಜುನಾಥ್, ಭಾರತಿ ಮತ್ತಿತರರಿದ್ದರು.