

ಅರಕಲಗೂಡು: ಪಟ್ಟಣದ ತಾಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಮತ್ತು ಸದಸ್ಯರಿಗೆ ಪಂಚಾಯತಿ ದೂರದೃಷ್ಟಿ ಯೋಜನೆಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ತಾಲೂಕು ಪಂಚಾಯತಿ ವತಿಯಿಂದ ಆಯೋಜಿಸಿರುವ ಕಾರ್ಯಾಗಾರದಲ್ಲಿ ತಾಪಂ ತರಬೇತಿ ಸಂಯೋಜಕ ದಿನೇಶ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಿದರು.
ಶಿಕ್ಷಣ, ಅರೋಗ್ಯ ವಲಯ, ಮಹಿಳೆಯರು, ಮಕ್ಕಳ ಅಭಿವೃದ್ಧಿ, ಜಲಸಮೃದ್ಧಿ ಗ್ರಾಪಂ ಯೋಜನೆ, ಸ್ವಚ್ಛ ಮತ್ತು ಹಸಿರು ಗ್ರಾಪಂ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸುರಕ್ಷಿತ ಗ್ರಾಪಂ, ಮುಲಸೌಕರ್ಯ ಸ್ವಾವಲಂಬಿ ಗ್ರಾಪಂ, ಬಡತನ ಮುಕ್ತ, ಜೀವನಪಾಯ ಮತ್ತು ಕೌಶಲ್ಯಭಿವೃದ್ಧಿ ವಿಷಯ ಕುರಿತು ವಿವರಿಸಿದರು.