ಪಂಚಾಕ್ಷರಿ ಮಂತ್ರ ಶಕ್ತಿ ಶಾಲಿ

Capture1
Published on

ಬಸವಕಲ್ಯಾಣ: ಪಂಚಾಕ್ಷರಿ ಮಂತ್ರ ಜಗತ್ತಿನ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದ್ದು, ಇದರಿಂದ ಸರ್ವ ಕಷ್ಟಗಳು ದೂರವಾಗಿ ನಾವು ಶಕ್ತಿಶಾಲಿ ಗಳಾಗಬಹುದು ಎಂದು ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಹೇಳಿದರು.

ಇಲ್ಲಿಯ ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಅನುಭವ ಮಂಟಪ ಟ್ರಸ್ಟ್ ವತಿಯಿಂದ ನಗರದ ಹೊಸಪೇಟ ಓಣಿಯಲ್ಲಿ ಭಾನುವಾರ ಆಯೋಜಿಸಿದ್ದ ಪಂಚಾಕ್ಷರಿ ಮಂತ್ರ ಹಾಗೂ ಇಷ್ಟಲಿಂಗ ಪೂಜೆ ಮಹತ್ವ ತಿಳಿಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಜಪ ಹಾಗೂ ಇಷ್ಟಲಿಂಗ ಪೂಜೆಯಿಂದ ಕಷ್ಟಗಳು ದೂರಾಗುತ್ತವೆ. ಮಹಿಳಾ ಮಂಡಳಿಯವರು ಕಳೆದ 21 ದಿನಗಳಿಂದ ಪಂಚಾಕ್ಷರಿ ಮಂತ್ರ ಜಪ, ವಚನಗಾಯನ ಪಠಣ ಮಾಡಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕಿ ಮೀನಾ ಜಾಧವ್, ಚಂದ್ರಪ್ಪ ಗುಂಗೆ ಮಾತನಾಡಿದರು. ಶಂಕ್ರಣ್ಣ ಕೊಳಕೂರ, ಸುಲೋಚನಾ ಮಾಮಾ, ಲಕ್ಷ್ಮೀಬಾಯಿ ಪಾಟೀಲ್, ಸರಸ್ವತಿ ಬಿರಾದಾರ, ಸುಮಿತ್ರಾ ದಾವಣಗಾಂವೆ, ಪ್ರಭಾವತಿ ಅವಸೆ, ಶಿವಕಾಂತಾ ಉಪಾಸೆ, ಜ್ಯೋತಿ ಶಿವಣಕರ್, ಅಂಜಲಿ ಚಿದ್ರಿ, ಮಂಗಲಾ ಪಾಟೀಲ್, ಬಸಮ್ಮ ಕಾಳಗೆ, ಸುರೇಖಾ ಮಂಗಾ, ಸುಲೋಚನಾ ಗುದಗೆ, ಮಹಾದೇವಿ ರಾಜೋಳೆ, ಸರಸ್ವತಿ ಗೌರ, ಗೌರಮ್ಮ ನಾಶೆ ಇದ್ದರು.

ರಾಜೇಶ್ವರಿ ಖೂಬಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿವಲೀಲಾ ವಂದಿಸಿದರು. ಜ್ಯೋತಿ ತೂಗಾಂವೆ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net