

ಬೀದರ್: ಇಲ್ಲಿಯ ನಂದಿ ಪೆಟ್ರೋಲ್ ಬಂಕ್ ಸಮೀಪದ ಸಪ್ತಸ್ವರ ಸಂಗೀತ ಶಾಲೆಯಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ 132ನೇ ಜಯಂತಿ ಆಚರಿಸಲಾಯಿತು.
ಸಂಗೀತ ಕ್ಷೇತ್ರಕ್ಕೆ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ನಾಗಮಾರಪಳ್ಳಿ ತಿಳಿಸಿದರು.
ಗವಾಯಿ ಅವರು ಶರಣರ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದರು. ಸುಶ್ರಾವ್ಯವಾಗಿ ಹಾಡಿ ಜನ ಮನಕ್ಕೆ ಮುಟ್ಟಿಸಿದ್ದರು ಎಂದು ಹೇಳಿದರು.
ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.