

ಚಿತ್ರದುರ್ಗ: ನಗರದ ಗಾನಯೋಗಿ ಸಂಗೀತ ಬಳಗದಿಂದ ಲಿಂ. ಪಂಡಿತ ಪಂಚಾಕ್ಷರ ಗವಾಯಿ ಅವರ 80 ನೇ, ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿ ಅವರ 14 ನೇ ಪುಣ್ಯ ಸ್ಮರಣೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೂ.30 ರಂದು ನಗರದಲ್ಲಿ ಏರ್ಪಡಿಸಲಾಗಿದೆ.
ಅಂದು ಸಂಜೆ 5 ಗಂಟೆಗೆ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಕಾರ‌್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಳಗದ ಅಧ್ಯಕ್ಷ ಎಂ.ತೋಟಪ್ಪ ಉತ್ತಂಗಿ ಅಧ್ಯಕ್ಷತೆ ವಹಿಸಲಿದ್ದಾರೆ. ನಟಿ ಜಯಲಕ್ಷ್ಮೀ ಪಾಟೀಲ್, ಜಿಲ್ಲಾಸ್ಪತ್ರೆ ಶುಶ್ರೂಷಕ ಎಂ.ಮಲ್ಲಣ್ಣ, ತಬಲ ಕಲಾವಿದ ಸಿದ್ದೇಶ್‌ಕುಮಾರ್, ಕೀಬೋರ್ಡ್ ಕಲಾವಿದ ಸಾಯಿಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ಪ್ರೇಮಾ ಬಾಲಚಂದ್ರಪ್ಪ, ನಳಿನಾ ಉಪನ್ಯಾಸ ನೀಡುವರು.
ಬಳಗದ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿ, ಉಪಾಧ್ಯಕ್ಷ ಎಲ್.ಎಸ್.ಚಿನ್ಮಯಾನಂದ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಸಂಜೆ 4 ಗಂಟೆಗೆ ನೀಲಕಂಠೇಶ್ವರ ದೇವಾಲಯದಿಂದ ಕಲ್ಯಾಣ ಮಂಟಪದವರೆಗೆ ಉಭಯ ಶ್ರೀಗಳ ಭಾವಚಿತ್ರಗಳೊಂದಿಗೆ ಮೆರವಣಿಗೆ ನಡೆಯಲಿದೆ.