ಪಂಚರತ್ನ ಸಮಾರೋಪ ಯಶಸ್ವಿಗೊಳಿಸಿ

24 krp 03
ಕೆ.ಆರ್.ಪೇಟೆಯ ಬಸವೇಶ್ವರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಮಾತನಾಡಿದರು.
Published on

ಕೆ.ಆರ್.ಪೇಟೆ: ಮೈಸೂರಿನಲ್ಲಿ ಮಾ.26ರಂದು ನಡೆಯಲಿರುವ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಮನವಿ ಮಾಡಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈವರೆಗೆ ತಾಲೂಕಿನ ಜನರು ನಿರೀಕ್ಷೆಗೂ ಮಿರಿ ಪಕ್ಷದ ಎಲ್ಲ ಕಾರ್ಯಕ್ರಮಗಳಿಗೂ ಬೆಂಬಲ ನೀಡಿದ್ದಾರೆ. ಮೈಸೂರಿಗೆ ತೆರಳಲು ತಾಲೂಕಿನಿಂದ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎ.ಎನ್.ಜಾನಕೀರಾಮು ಮಾತನಾಡಿ, ಲಭ್ಯವಿರುವ ಸಮಯದಲ್ಲಿ ಕಾರ್ಯಕರ್ತರು ಪಾದರಸದಂತೆ ಕೆಲಸ ಮಾಡುವ ಮೂಲಕ ತಾಲೂಕಿನಲ್ಲಿ ಜೆಡಿಎಸ್ ಬಾವುಟ ಹಾರಿಸಬೇಕು ಎಂದರು.

ಮುಖಂಡರಾದ ಮಲ್ಲೇನಹಳ್ಳಿ ಮೋಹನ್, ಅಗ್ರಹಾರಬಾಚಹಳ್ಳಿ ನಾಗೆಶ್, ಕರಬರಹಳ್ಳಿ ನಾಗೇಶ್‌ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net