ಪಂಚರತ್ನ ಯಾತ್ರೆ ಸಮಾರೋಪಕ್ಕೆ ಹಾಸನದಿಂದ ಸಾವಿರಾರು ಕಾರ್ಯಕರ್ತ ಭಾಗಿ

ಪಂಚರತ್ನ ಯಾತ್ರೆ ಸಮಾರೋಪಕ್ಕೆ ಹಾಸನದಿಂದ ಸಾವಿರಾರು ಕಾರ್ಯಕರ್ತ ಭಾಗಿ
Published on

ಹಾಸನ : ಮೈಸೂರಿನಲ್ಲಿ ಭಾನುವಾರ ಆಯೋಜನೆಗೊಂಡಿರುವ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭಕ್ಕೆ ಹಾಸನ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಭಾನುವಾರ ಮೈಸೂರಿಗೆ ತೆರಳಿದರು. ಎಚ್.ಪಿ. ಸ್ವರೂಪ್ ನೇತತ್ವದಲ್ಲಿ ಸಾವಿರಾರು ಜನರು ಪ್ರಯಾಣ ಬೆಳೆಸಿದರು. ನಗರದ ರಿಂಗ್ ರಸ್ತೆ ಬಳಿ ಎಚ್.ಪಿ. ಸ್ವರೂಪ್ ನಿವಾಸದ ಮುಂದೆ ಜಮಾಯಿಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಸಾರಿಗೆ ಬಸ್, ಟೆಂಪೊ ಹಾಗೂ ಕಾರಿನ ಮೂಲಕ ಮಧ್ಯಾಹ್ನ ಪ್ರಯಾಣ ಬೆಳೆಸಿದರು.

ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಪಿ. ಸ್ವರೂಪ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವರಾದ ಎಚ್.ಡಿ. ರೇವಣ್ಣನವರ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಮುಖಂಡರು ಹಾಗೂ ಎಲ್ಲಾ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಪಂಚರತ್ನ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳುತ್ತಿದ್ದೇವೆ. ಪಂಚರತ್ನ ಯಾತ್ರೆಯಲ್ಲಿ ಬೆಂಬಲ ಸೂಚಿಸಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಉತ್ಸಾಹದಿಂದ ಪ್ರಯಾಣ ಮಾಡಲಾಗುತ್ತಿದೆ ಎಂದರು.

ಒಟ್ಟು 120 ಕೆಎಸ್‌ಆರ್‌ಟಿಸಿ ಬಸ್‌ಗಳು, 60 ಟೆಂಪೂಗಳು ಹಾಗೂ ಕಾರುಗಳಲ್ಲಿ ಹೊರಡುತ್ತಿದ್ದೇವೆ. ಈ ಸಮಾವೇಶದಲ್ಲಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಜಿಲ್ಲೆಯಿಂದ 443 ಬಸ್‌ಗಳಲ್ಲಿ ಪ್ರಯಾಣ

ಮೈಸೂರಿನ ಸಮಾರೋಪ ಸಮಾರಂಭಕ್ಕೆ ಹಾಸನ ಜಿಲ್ಲೆಯಿಂದ ಒಟ್ಟು 453 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರಯಾಣ ಬೆಳೆಸಿದ್ದಾರೆ. ಉಳಿದಂತೆ ಖಾಸಗಿ ವಾಹನಗಳಲ್ಲಿಯೂ ತೆರಳಿದ್ದಾರೆ. ಹಾಸನ ಜಿಲ್ಲೆಯಿಂದ ಸುಮಾರು 50ರಿಂದ 60 ಸಾವಿರ ಜನರು ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭಕ್ಕೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net