

ತುಮಕೂರು: ಮುಂದಿನ ಚುನಾವಣೆಯಲ್ಲಿ ಗೆದ್ದ ನಂತರ ಐದು ವರ್ಷಗಳ ಕಾರ್ಯಕ್ರಮದಲ್ಲಿ ನಾವು ರೂಪಿಸಿರುವ ಪಂಚರತ್ನ ಯೋಜನೆ ಪೂರ್ಣ ಮಾಡಲಿಲ್ಲ ಎಂದರೆ ಜಾತ್ಯತಿತ ಜನತಾದಳವನ್ನೇ ವಿಸರ್ಜನೆ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದರು.
ಗ್ರಾಮಾಂತರ ವಿಧಾನಸಭಾ ೇತ್ರದ ಹೆಬ್ಬೂರಿನಲ್ಲಿ ಜೆಡಿಎಸ್ ವತಿಯಿಂದ ಗುರುವಾರ ಆಯೋಜಿಸಿದ್ದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ 51 ಉಪನದಿಗಳು, ಪ್ರಮುಖ ನದಿಗಳಿಂದ ಶುದ್ಧ ಕುಡಿಯುವ ನೀರನ್ನು ಪ್ರತಿ ಮನೆ ಬಾಗಿಲಿಗೆ ಹಾಗೂ ರೈತರ ಹೊಲಗಳಿಗೆ ಹರಿಸುವ ಯೋಜನೆ ರೂಪಿಸಿ ಸವಾಲನ್ನು ಸ್ವೀಕರಿಸಿದ್ದೇವೆ. ಅದನ್ನು ಈಡೇರಿಸದಿದ್ದರೆ ಪಕ್ಷ ಇದ್ದರೇನು ಎಂದರು.
ಕಳೆದ ಎರಡು ವರ್ಷಗಳಿಂದ ಕರೊನಾ ಸಂದರ್ಭದಲ್ಲಿ ನಾವು ಸುಮ್ಮನೆ ಕೂತಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಪ್ರಮುಖವಾಗಿ ಐದು ಕಾರ್ಯಕ್ರಮಗಳ ಯೋಜನೆ ಪಂಚರತ್ನವನ್ನು ರೂಪಿಸಿದ್ದೇವೆ. ವಸತಿ, ಶಿಣ, ಆರೋಗ್ಯ, ಉದ್ಯೋಗ, ಕೃಷಿಗೆ ವಿಶೇಷ ಯೋಜನೆ ಕೈಗೊಂಡಿದ್ದೇವೆ. ಪಂಚರತ್ನಗಳನ್ನು ಪೂರ್ಣಗೊಳಿಸದಿದ್ದಲ್ಲಿ ಮತ್ತೆ ನಿಮ್ಮ ಮುಂದೆ ಮತ ಕೇಳಲಿಕ್ಕೆ ಬರುವುದಿಲ್ಲ. ಮುಂದಿನ ತೀರ್ಮಾನವನ್ನು ನನ್ನ ನಾಡಿನ ಜನಕ್ಕೆ ಬಿಟ್ಟಿದ್ದೇನೆ ಎಂದು ಹೇಳಿದರು.
ಮನಸು ಬೆಸೆಯಲಿ: ಸರ್ಕಾರಗಳು ಇರುವುದು ಜನರ ಮನಸ್ಸು ಹಾಗೂ ಮನೆಗಳನ್ನು ಒಡೆಯುವುದಕ್ಕಲ್ಲ. ಮನಸ್ಸು ಬೆಸೆಯಲು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಅವರಾಗಲಿ, ಅವರ ಮಕ್ಕಳಾದ ನಾವುಗಳಾಗಲಿ, ನೀರಾವರಿ ಸೇರಿ ಯಾವುದೇ ವಿಚಾರದಲ್ಲಿ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿಲ್ಲ. ಹಾಸನ ಜಿಲ್ಲೆಗೆ 1.20 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಿದ್ದರೆ, ತುಮಕೂರು ಜಿಲ್ಲೆಯ 3.20 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ. ಇಂದಿನ ಹಾರಂಗಿ, ಕಬಿನಿ, ಹೇಮಾವತಿ, ಯಗಚಿ ಅಣೆಕಟ್ಟುಗಳ ನಿರ್ಮಾಣಕ್ಕೆ 1969ರಲ್ಲಿ ವಿಧಾನಸಭೆಯಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಮಂಡಿಸಿದ ಖಾಸಗಿ ಮಸೂದೆಯೇ ಕಾರಣ ಎಂದು ಸ್ಪಷ್ಟಪಡಿಸಿದರು.
ಮುಂದಿನ ಜೂನ್ನಲ್ಲಿ ಜೆಡಿಎಸ್ ಜನಪರ ಕಾರ್ಯಕ್ರಮಗಳ ಕುರಿತು ಕೈಪಿಡಿ ಬಿಡುಗಡೆ ಮಾಡಿ, ರಾಜ್ಯದ ಪ್ರತಿ ಮನೆಮನೆಗೆ ತಲುಪುವಂತೆ ಮಾಡಿ, ಜನರಲ್ಲಿ ಬಿಜೆಪಿ, ಕಾಂಗ್ರೆಸ್ ರಾಜ್ಯಕ್ಕೆ ಮಾಡಿರುವ ಅನ್ಯಾಯ ತಿಳಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ಆಶಯ: ಈ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಪ್ರತಿ ಮನೆಗೂ, ಕುಡಿಯುವ ನೀರು ಮತ್ತು ಪ್ರತಿ ಊರಿನ ಕೆರೆ ತುಂಬಿಸಬೇಕೆಂಬುದು ಜೆಡಿಎಸ್ ಆಶಯವಾಗಿದೆ. ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅರಿವು ಇರುವ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಮಾತ್ರ ಈ ಬೃಹತ್ ಕಾರ್ಯ ಸಾಧ್ಯ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಕೆ.ಎಂ.ತಿಮ್ಮರಾಯಪ್ಪ, ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್, ಎಸ್ಸಿ ಟಕದ ತಾಲೂಕು ಅಧ್ಯಕ್ಷ ಬೆಳಗುಂಬ ವೆಂಕಟೇಶ್, ರಾಜಾಪುರದ ತಿಮ್ಮಪ್ಪ ಉಪಸ್ಥಿತರಿದ್ದರು.
ಗೌರಿಶಂಕರ್ ಮಂತ್ರಿ ಆಗ್ತಾರೆ !: ಗ್ರಾಮಾಂತರ ೇತ್ರದಲ್ಲಿ ಡಿ.ಸಿ.ಗೌರಿಶಂಕರ್ ನಿಮ್ಮ ಮನೆ ಮಗನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೌರಿಶಂಕರ ಗೆಲುವು ನಿಶ್ಚಿತ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಅವರನ್ನು ಮಂತ್ರಿ ಮಾಡಿ ಇಡೀ ರಾಜ್ಯದ ಜವಾಬ್ದಾರಿ ನೀಡಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಸೇಬಿನ ಹಾರ, ಪೂರ್ಣಕುಂಭ ಸ್ವಾಗತ: ಕಾರ್ಯಕ್ರಮಕ್ಕೂ ಮುನ್ನ ನಾಗವಲ್ಲಿ ಬಳಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ ಸೇಬಿನ ಹಾರ ಹಾಗೂ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿ ಅಭಿಮಾನ ಮೆರೆದರು.
ಗ್ರಾಮಾಂತರ ಪದಾಧಿಕಾರಿಗಳ ಕಡೆಗಣನೆ: ಜನತಾ ಜಲಧಾರೆ ಕಾರ್ಯಕ್ರಮಕ್ಕಾಗಿ ಹಗಲುರಾತ್ರಿ ದುಡಿದ ಗ್ರಾಮಾಂತರ ಕ್ಷೇತ್ರದ ಪದಾಧಿಕಾರಿಗಳಿಗೆ ವೇದಿಕೆ ಮೇಲೆ ಸ್ಥಳಾವಕಾಶ ಇರಲಿಲ್ಲ. ತುಮಕೂರು ನಗರ ಕ್ಷೇತ್ರದ ಮುಖಂಡರೇ ವೇದಿಕೆಯಲ್ಲಿ ಕುಮಾರಸ್ವಾಮಿ ಜತೆ ಫೋಸ್ಕೊಟ್ಟು ಬೀಗುತ್ತಿದ್ದರು. ಇದು ಸಹಜವಾಗಿ ಗ್ರಾಮೀಣ ಪದಾಧಿಕಾರಿಗಳು, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು.
ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿಗೆ ನೀರಾವರಿ ಜೆಡಿಎಸ್ನ ಪಂಚರತ್ನ ಯೋಜನೆಗಳಾಗಿವೆ. 2023ರ ಚುನಾವಣೆಯಲ್ಲಿ ಬಹುಮತ ನೀಡಿದರೆ ಈ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ. ಇಲ್ಲವೇ ಜೆಡಿಎಸ್ ವಿಸರ್ಜಿಸುತ್ತೇನೆ. > ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ