ಪಂಚಮಸಾಲಿ ಹಾಸ್ಟೆಲ್‌ಗೆ ಅನುದಾನ ಬಿಡುಗಡೆಗೆ ಪ್ರಯತ್ನ

Attempt to release grant to Panchmasali Hostel
ಸಿಂದಗಿ ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ- ಸಿಂದಗಿ ಮತಕ್ಷೇತ್ರದ ಶಾಸಕ ಎ.ಎಂ.ಮನಗೂಳಿ ದಂಪತಿಯನ್ನು ಪಂಚಮಸಾಲಿ ಸಮಾಜದಿಂದ ಸನ್ಮಾನಿಸಲಾಯಿತು. ಬಸವಜಯ ಮೃಂತ್ಯುಂಜಯ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಎಂ.ಎಂ.ಹಂಗರಗಿ, ಮಹಾಂತೇಶ ಯಡ್ರಾಮಿ ಇತರರಿದ್ದರು.
Published on

ಸಿಂದಗಿ: ಕಳೆದ ಸರ್ಕಾರದ ಅವಧಿಯಲ್ಲಿ ನನೆಗುದಿಗೆ ಬಿದ್ದ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳ ವಸತಿ ನಿಲಯದ 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎ.ಎಂ.ಮನಗೂಳಿ ಹೇಳಿದರು.

ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ದೇವರಹಿಪ್ಪರಗಿ ಹಾಗೂ ಸಿಂದಗಿ ಮತಕ್ಷೇತ್ರದ ಶಾಸಕದ್ವಯರಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಂಚಮಸಾಲಿ ಸಮಾಜದ ಜಗದ್ಗುರುಗಳು ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಒದಗಿಸುವ ದಿಸೆಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ಹೋರಾಟದಲ್ಲಿ ಪಾಲ್ಗೊಂಡು ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ. ನಮ್ಮ ಸಮಾಜದ ನಾಯಕರ ಇತಿಹಾಸ ದೊಡ್ಡದು. ಸಿಂದಗಿಯಲ್ಲಿ ಅಲ್ಪಸಂಖ್ಯಾತ ಸಮಾಜದ ಯುವಕ ಕಿತ್ತೂರು ಚನ್ನಮ್ಮನವರ ವೃತ್ತಕ್ಕಾಗಿ ಜಾಗ ನೀಡಿರುವುದು, ಪಂಚಮಸಾಲಿ ಸಮಾಜದ ನಾಯಕರ ಸರ್ವ ಸಮಾಜಗಳ ಸಮಭಾವದ ಒಡನಾಟಕ್ಕೆ ಸಾಕ್ಷಿಯಾಗಿದೆ ಎಂದರು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ನಿಮ್ಮೆಲ್ಲರ ಪ್ರೀತಿ ಮುಖ್ಯ. ಚುನಾವಣೆಯಲ್ಲಿ ನನ್ನ ಸಮಾಜದವರು ನನ್ನ ಬೆನ್ನಿಗೆ ನಿಂತು ಗೆಲ್ಲಿಸಿದ್ದಕ್ಕೆ ನಾನು ಚಿರಋಣಿಯಾಗಿರುವೆ. ಕ್ಷೇತ್ರದ ನೀರಾವರಿಗೆ ಆದ್ಯತೆ ನೀಡಲಾಗುವುದು ಎಂದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃಂತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ 2ಎ ಮೀಸಲಾತಿ ಹೋರಾಟ ನಡೆಸಿದ್ದೇವೆ. ಪಂಚಮಸಾಲಿಗಳ ಒಗ್ಗಟ್ಟಿನ ಹೋರಾಟದಿಂದ ಕಾಲ ಬದಲಾಗಿದ್ದು, ನಮ್ಮೆಲ್ಲರ ಹಕ್ಕಿಗಾಗಿ ಹೋರಾಟ ನಡೆಸುವೆ ಎಂದರು.

ಆಸಂಗಿಹಾಳದ ಆರೂಢಮಠದ ಶಂಕರಾನಂದ ಸ್ವಾಮೀಜಿ, ಎಂ.ಎಂ.ಹಂಗರಗಿ, ಮಹಾಂತೇಶ ಯಡ್ರಾಮಿ, ಶಿವಪ್ಪಗೌಡ ಬಿರಾದಾರ, ವಿ.ಬಿ.ಕುರುಡೆ, ಬಿ.ಎಂ.ಪಾಟೀಲ, ಜಿಪಂ ಮಾಜಿ ಸದಸ್ಯ ಗುರುರಾಜ ಪಾಟೀಲ, ಸಿದ್ಧರಾಮ ಪಾಟೀಲ ಹೂವಿನಹಳ್ಳಿ, ಆನಂದ ಶಾಬಾದಿ, ಎಂ.ಆರ್.ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಡಾ.ಅರವಿಂದ ಮನಗೂಳಿ, ಸಂಗನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಅರವಿಂದ ಹಂಗರಗಿ, ಅಶೋಕ ಅಲ್ಲಾಪೂರ, ಬಿ.ಜಿ.ನೆಲ್ಲಗಿ, ಎಸ್.ಎಂ.ಬಿರಾದಾರ, ಸತೀಶ ಬಸರಕೋಡ, ಸಿದ್ದು ಬಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net