

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ೨ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರ ಲಿಂಗಾಯತರಿಗೆ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಲು ಮಾ.೩ರಂದು ಕಲಬುರಗಿಯಲ್ಲಿ ಪ್ರಥಮ ಬೃಹತ್ ಸಮಾವೇಶ ಕೈಗೊಳ್ಳಲು ನಿರ್ಧರಿಸಲಾಯಿತು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕೂಡಲಸಂಗಮ ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಮಾ.೩ಕ್ಕೆ ಕಲಬುರಗಿ-ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಸಮಾವೇಶ ಕಲಬುರಗಿ ನಗರದಲ್ಲಿ ನಡೆಯಲಿದ್ದು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ .15ರಿಂದ ಮೂರು ಜಿಲ್ಲೆಗಳ ತಾಲೂಕು, ಜಿಪಂ ಕ್ಷೇತ್ರಗಳಿಗೆ ಭೇಟಿ ನೀಡಿ, ಮುಖಂಡರ ಸಭೆ ನಡೆಸಿ, ಆಹ್ವಾನಿಸಬೇಕು. ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡುವ ಕುರಿತು ಚರ್ಚಿಸಲಾಯಿತು.
ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಲೋಕಸಭೆ ಚುನಾವಣೆಗೆ ಮುನ್ನ ೨ ಮೀಸಲು, ಓಬಿಸಿ ಪಟ್ಟಿಗೆ ಸೇರ್ಪಡೆಗೆ ಬೇಡಿಕೆ ಇಡಲು ಸಮಾವೇಶಕ್ಕೆ ನಿರ್ಧರಿಸಲಾಗಿದೆ. ಲಿಂಗಾಯತರು ಮತದಾನ ಮಾಡಲು, ದಾನಧರ್ಮ ಮಾಡಲು, ಪ್ರಾಣ ತ್ಯಾಗ ಮಾಡಲು ಅಷ್ಟೇ ಅಲ್ಲ. ನಮಗೂ ನ್ಯಾಯ ದೊರೆಯಲು ಬೇಡಿಕೆ ಇಡಲಾಗುವುದು. ಬಹುತೇಕರಲ್ಲಿ ಲಿಂಗಾಯತರು ಶ್ರೀಮಂತರು ಎಂಬ ಭಾವವಿದೆ. ಶೇ.೨ ಮಾತ್ರ ಶ್ರೀಮಂತರಿದ್ದು , ಶೇ.೩ ಮಧ್ಯಮವರ್ಗದವರಿದ್ದಾರೆ. ಶೇ.೯೫ ಜನ ಕೃಷಿ ಅವಲಂಬಿತ ಬಡವರಿದ್ದಾರೆ ಎಂದರು.
ಜಿಲ್ಲಾ ಪಂಚಮಸಾಲಿ ಅಧ್ಯಕ್ಷ ಶರಣು ಪಪ್ಪಾ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಶರಣಗೌಡ ಪಾಟೀಲ್, ರಾಹುಲ್ ಹೊನ್ನಳ್ಳಿ, ಸಿದ್ದು ದೇಸಾಯಿ, ಕಲ್ಯಾಣರಾವ ಪಾಟೀಲ್, ದೇವೇಂದ್ರಗೌಡ, ಈರಣ್ಣ ಗುಳೇದ್, ಆನಂದ ದೇಶಮುಖ, ಚಂದ್ರಶೇಖರ ಬೆಣ್ಣೂರ, ಸಿದ್ರಾಮಪ್ಪ ಮುದ್ನೂರ, ದೇವೇಂದ್ರಗೌಡ ಬಿರಾದಾರ ಇತರರಿದ್ದರು.