

ಅಥಣಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಭಾನುವಾರ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.
ಪಂಚಮಸಾಲಿ ಸಮುದಾಯದ ತಾಲೂಕಾಧ್ಯಕ್ಷ ಶಿವಾನಂದ ಗುಡ್ಡಾಪುರ ಮಾತನಾಡಿ, ಸಮುದಾಯದ ಜನರು ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ ಸಮುದಾಯಕ್ಕೆ 2ಎ ವಿಚಾರವಾಗಿ ಚಳಿಗಾಲದ ಅಧಿವೇಶನದಲ್ಲಿ ಧ್ವನಿಯೆತ್ತಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಬಗ್ಗೆ ಸದನದಲ್ಲಿ ಮಾತನಾಡುವ ಜತೆಗೆ ಶಾಸಕ ರಾಜು ಕಾಗೆ ಜತೆಗೂಡಿ ಮುಖ್ಯಮಂತ್ರಿಗೆ ಮನವರಿಕೆ ಮಾಡಲಿದ್ದೇವೆ ಎಂದರು.
ರಾಜು ಗುಡೋಡಗಿ, ಗುರು ದಾಶ್ಯಾಳ, ಅಪ್ಪು ನೇಮಗೌಡ, ರಾಮಗೊಂಡ ಗುಮತಾಜ, ಬಿ.ಬಿ.ಬಿಸಲಾಪೂರ, ಅಶೋಕ ಅಮ್ಮಣಗಿ, ಶಿವಾನಂದ ಗೊಲಬಾವಿ, ಕುಮಾರ ಪಾಟೀಲ, ಬಿ.ಎಸ್.ಪಾಟೀಲ, ಮಹಾದೇವ ಬಸಗೌಡರ, ಸುರೇಶ ವಾಡೆದ, ಚಿದಾನಂದ ದರೂರ, ಮಾರುತಿ ಸತಿಗೌಡರ, ಮುರುಗೇಶ ಪಾಟೀಲ, ಗುರುಪಾದ ಸವದಿ, ಅಶೋಕ ಮಗದುಮ್ಮ ಇತರರು ಇದ್ದರು.