ಪಂಚದಿನದ ಗಣೇಶನಿಗೆ ಅದ್ದೂರಿ ವಿದಾಯ

ydg01
Published on

ಯಾದಗಿರಿ: ನಗರದಲ್ಲಿ ಕಳೆದ ಐದು ದಿನಗಳ ಹಿಂದೆ ಪ್ರತಿಪ್ಠಾಪನೆಗೊಂಡಿದ್ದ ೧೫ ಗಣೇಶ ವಿಗ್ರಹ ಗುರುವಾರ ರಾತ್ರಿ ಅಪಾರ ಭಕ್ತ ಸಮೂಹ ಮೆರವಣಿಗೆ ಮೂಲಕ ಇಲ್ಲಿನ ಲುಂಬಿನಿ ವನ, ದೊಡ್ಡಕೆರೆಯಲ್ಲಿ ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು.

ಬುಧವಾರ ಬೆಳಗ್ಗೆಯೇ ನಗರದ ವಿವಿಧಡೆ ವಿಸರ್ಜನೆ ತಯಾರಿ ನಡೆಸಿದ್ದ ಮಂಡಳಿಗಳ ಪ್ರಮುಖರು ಸಂಜೆಯಾಗುತಲೇ ಬಾಜಾ, ಭಜಂತ್ರಿ ಮತ್ತು ವಿವಿಧ ವ್ಯಾದಗಳೊಂದಿಗೆ ಕುಣಿದು ಕುಪ್ಪಳಿಸಿ ವಿಘ್ನ ನಿವಾರಹ ವಿನಾಯಕನಿಗೆ ಭಕ್ತಿಯ ವಿದಾಯ ಹೇಳಿದರು. ಟ್ರಾÈಕ್ಟರ್, ಆಟೋರಿಕ್ಷಾ ಟಂಟA ಹಾಗೂ ಪಾದಯಾತ್ರೆ ಮೂಲಕ ಗಣೇಶನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಗಣಪತಿ ಬಪ್ಪ ಮೋರಿಯಾ ಎಂಬ ಜೈ ಘೋಷದೊಂದಿಗೆ ಸಂಭ್ರಮದಿAದ ಯುವಕರು ಡಿಜೆ ಧ್ವನಿಗೆ ಹೆಜ್ಜೆ ಹಾಕಿದರು.

ಸ್ಟೇಷನ್ ಬಜಾರ್, ಮಾತಾ ಮಾಣಿಕೇಶ್ವರಿ ನಗರ, ಲಾಡೆದಗಲ್ಲಿ ಸೇರಿ ನಗರದ ವಿವಿಧಡೆಗಳಿಂದ ಆಗಮಿಸಿದ ಮೆರವಣಿಯುದ್ದಕ್ಕೂ ವಿದ್ಯುತ್ ಬೆಳಕಿನ ವ್ಯವಸ್ಥೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕೆಲ ಗಣೇಶ ವಿಗ್ರಹಗಳ ವಿಸರ್ಜನೆ ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು ಕೋಲಾಟ, ಜಾನಪದ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಲಕ್ಷಿö್ಮÃ ನಗರದಲ್ಲಿನ ಗಣೇಶ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಮಹಾಪ್ರಸಾದ ನಡೆಯಿತು. ಪ್ರಮುಖರಾದ ರಾಚನಗೌಡ ಪೋಲಿಸ್ ಪಾಟೀಲï ಕಾಳೆಬೆಳಗುಂದಿ, ಸಂತೋಷ ಕುಮಾರ ನಿರ್ಮಾಲಕರ್, ಶ್ರವಣಕುಮಾರ ನಿರ್ಮಲಕರ್, ನರೇಂದ್ರ ಗತ್ತಿ, ಗೌಡಪ್ಪಗೌಡ, ಆಂಜನೇಯ, ಸುರೇಶ ಪತ್ತಾರ್, ನಾಗರಾಜ ಬಿಳ್ಳಾರ, ಅP್ಷÀಯ ಹೆಂದೆ, ಬಸವರಾಜ, ಜಗದೀಶ ಬೈತಿಮುಲಿ, ಧನರಾಜ, ಅನೀಲï, ಶರಣಪ್ಪ ಭಾಗವಹಿಸಿದ್ದರು.
ಯುವಕರ ಗುಂಪು ಗುಲಾಲ್ ಎರಚಿ, ಜೈಕಾರ ಹಾಕುತ್ತ ಮೆರವಣಿಗೆಯುದ್ದಕ್ಕೂ ಜೈಶ್ರೀರಾಮ, ಗಣೇಶ ಮಹಾರಾಜಕಿ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ರಾತ್ರಿ ದೊಡ್ಡ ಕೆರೆ, ಲುಂಬಿನಿ ವನದ ಬಳಿ ಬಂದ ಗಣೇಶ ವಿಗ್ರಹಗಳಿಗೆ ಸಕಲ ಪೂಜೆ ನೆರವೇರಿಸಿ ಒಂದೊAದಾಗಿ ನದಿಯಲ್ಲಿ ಬಿಡುವ ಮೂಲಕ ಪಂಚ ದಿನದ ಗಣೇಶ ಹಬ್ಬಕ್ಕೆ ಸಂಭ್ರಮದ ವಿದಾಯ ಹೇಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net