

ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2 ದಿನಗಳ ಕಾಲ,ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಅಧಿಕಾರಿ,ನೌಕರರ ಸಂ ಘ ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಈಚೆಗೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ್ದ ಪಿಡಿಒ ಸಹಿತ ಗ್ರಾಪಂಅಧಿಕಾರಿ,ಸಿಬ್ಬಂ ದಿ ಹಾಗೂ ಗ್ರಾಪಂ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ಮುಂದುವರಿಸಿದರು.
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ,ಸರ್ಕಾರದ ನಿರ್ಲಕ್ಷೃಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಅಲ್ಲಿಂದ ಜಿಪಂ ಕಚೇರಿವರೆಗೆ ಪಾದಯಾತ್ರೆ ಮೂಲಕ ಸಾಗಿ ಅಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಪ್ರತಿಭಟನಾ ಕಾ ರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಿಡಿಒ ಸಂಘದ ಕಾರ‌್ಯಾಧ್ಯಕ್ಷ ಆರ್.ಪಾತಣ್ಣ,ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಗ್ರಾಪಂ ಕಚೇರಿಗಳಿಗೆ ಬೀಗ ಹಾಕಿ ಮುಷ್ಕರ ನಡೆಸುತ್ತಿದ್ದೇವೆ.
ಸಚಿವ ಪ್ರಿಯಾಂಕ್‌ಖರ್ಗೆ ಅವರು ಅ.10ರಂದು ಸಭೆ ಕರೆದಿದ್ದಾರೆ. ಪ್ರತಿಭಟನೆ ಆರಂಭಿಸಿದ ದಿನದಂದೇ ಸಚಿವರು ನಮ್ಮ ಬೇಡಿಕೆ ಕುರಿತು ಚರ್ಚಿಸಿದ್ದರೆ ಮುಷ್ಕರ ಮುಂದುವರಿಸುವ ಅಗತ್ಯ ಬೀಳುತ್ತಿರಲಿಲ್ಲ. ಪಿಡಿಒ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಏರಿ ಸುವುದು.
ಜೇಷ್ಠತಾ ಪಟ್ಟಿ ಬಿಡುಗಡೆ ಮಾಡಿ ಬಡ್ತಿಗೆ ಕ್ರಮ ವಹಿಸುವುದು,ಕೂಸಿನ ಮನೆ ಅಗತ್ಯತೆಯನ್ನು ಪರಿಶೀಲಿಸುವುದು, ಗ್ರಾಪಂ ನೌಕರ ರಿಗೆ ವೇತನ ಶ್ರೇಣಿ,ಸೇವಾ ಹಿರಿತನ ವೇತನ ಜಾರಿ,ಇಲಾಖೆ ವೇತನ ನಿಗದಿ ಪಡಿಸಿ ನೌಕರರ ಖಾತೆಗೆ ಸಂಬಳ ಪಾವತಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂ ದು ಎಚ್ಚರಿಸಿದರು.
ಗ್ರಾಪಂ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ರಹಮತ್,ಸಂತೋಷ್,ಒಬಳೇಶ್ ಮತ್ತಿತರರು ಮಾತನಾಡಿ ಸರ್ಕಾರದ ನಿರ್ಲಕ್ಷೃನಡೆಯ ನ್ನು ಕಟುವಾಗಿ ಟೀಕಿಸಿದರು.
ಡ್ಯಾಟಾ ಎಂಟ್ರಿ ಆಪರೇಟರ್ ಸಂಘದ ಜಿಲ್ಲಾಧ್ಯಕ್ಷ ಜಗದೀಶ್,ಬಿಲ್‌ಕಲೆಕ್ಟರ್ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ,ನೀರಗಂಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್,ಗ್ರೇಡ್ 1 ಕಾರ‌್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಿ,ಗ್ರೇಡ್ -2 ಕಾರ‌್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ತಿಮ್ಮರಾ ಜು,ಪಿಡಿಒಗಳಾದ ಎಸ್.ಎಂ.ಸಂತೋಷ್,ರೂಪಾಕುಮಾರಿ,ಶಿಲ್ಪಾ,ಶೃತಿ,ಹಂಸಿರಾಬಾನು,ವನಜಾಕ್ಷಿ,ಚೈತ್ರಾ ಮತ್ತಿತರ ನೂರಾರು ಅಧಿಕಾರಿ -ಸಿಬ್ಬಂದಿ,ಗ್ರಾಪಂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.