

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾಡಳಿತ ಹಾಗೂ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಪಂ. ಡಾ. ಮಲ್ಲಿಕಾರ್ಜುನ ಮನಸೂರ ಅವರ 112ನೇ ಜನ್ಮದಿನಾಚರಣೆ ಅಂಗವಾಗಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಹಾಗೂ ಯುವ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಜರುಗಿತು.
ಖ್ಯಾತ ಹಿಂದೂಸ್ತಾನಿ ಶಾಸೀಯ ಸಂಗೀತಗಾರ ಪುಣೆಯ ಪಂ. ಉಲ್ಲಾಸ್ ಕಶಾಳ್ಕರ್ ಅವರಿಗೆ ಪಂ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 1 ಲಕ್ಷ ರೂ. ಹಾಗೂ ಪ್ರಶಸ್ತಿ ಲಕ ಒಳಗೊಂಡಿದೆ. ಇದೇವೇಳೆ ಧಾರವಾಡದ ತಬಲಾ ವಾದಕ ಶ್ರೀಧರ ಮಾಂಡ್ರೆ ಅವರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 25,000 ರೂ. ನಗದು ಹಾಗೂ ಪ್ರಶಸ್ತಿ ಲಕ ಒಳಗೊಂಡಿದೆ.
ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ, ನೀಲಾ ಎಂ. ಕೊಡ್ಲಿ, ಚಂದ್ರಶೇಖರ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಂಕರ ಕುಂಬಿ, ಇತರರಿದ್ದರು.
ಸಮಾರಂಭದ ನಂತರ ಪ್ರಶಸ್ತಿ ಪುರಸ್ಕೃತ ಶ್ರೀಧರ ಮಾಂಡ್ರೆ ಅವರಿಂದ ತಬಲಾ ವಾದನ ಹಾಗೂ ಪಂ. ಉಲ್ಲಾಸ್ ಕಶಾಳ್ಕರ್ ಗಾಯನ ಪ್ರಸ್ತುತಪಡಿಸಿದರು.
ಬೆಳಗ್ಗೆ ಡಾ. ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ನಂತರ ವಿದುಷಿ ಅಕ್ಕಮಹಾದೇವಿ ಆಲೂರ, ಡಾ. ಚಂದ್ರಿಕಾ ಕಾಮತ್, ನೀಲಾ ಎಂ. ಕೊಡ್ಲಿ ಹಾಗೂ ಮಿಥುನ ಚಕ್ರವರ್ತಿ ಸಂಗೀತ ಸೇವೆ ಸಲ್ಲಿಸಿದರು. ಪರಶುರಾಮ ಶರಣಪ್ಪ ಕಟ್ಟಿಸಂಗಾವಿ ಹಾರ್ಮೋನಿಯಂ ಹಾಗೂ ಅಲ್ಲಮಪ್ರಭು ಕಡಕೋಳ ತಬಲಾ ಸಾಥ್ ನೀಡಿದರು.