ನ್ಯುಮೋನಿಯಾ ನಿಯಂತ್ರಣಕ್ಕೆ ಬೇಕು ಪಿಸಿವಿ ಲಸಿಕೆ

oplus_2
oplus_2
Published on

ಚಿತ್ರದುರ್ಗ: ಮಕ್ಕಳಿಗೆ ತಪ್ಪದೇ ಪಿಸಿವಿ ಲಸಿಕೆ ಹಾಕಿಸುವ ಮೂಲಕ ನ್ಯುಮೋನಿಯಾ ನಿಯಂತ್ರಿಸಬೇಕೆಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ನಾಗರಿಕರಿಗೆ ಮನವಿ ಮಾಡಿದರು.

ನಗರದ ಜೆಸಿಆರ್ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಲಸಿಕಾ ಕಾರ‌್ಯಕ್ರಮದಲ್ಲಿ ಮಾತನಾಡಿ, ನ್ಯುಮೋನಿಯಾ ಬ್ಯಾಕ್ಟೀರಿಯಾ, ವೈರಲ್ ಅಥವಾ ಫಂಗಲ್ ಸೋಂಕಿನಿಂದ ಶ್ವಾಸಕೋಶದಲ್ಲಿ ಉರಿಯೂತ ಉಂಟಾಗಿ ಉಸಿರಾಡಲು ಕಷ್ಟವಾಗುತ್ತದೆ, ಆದ್ದರಿಂದ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಪ್ರತಿ ವಷರ್ ನ. 14ರಂದು ವಿಶ್ವ ನ್ಯುಮೋನಿಯಾ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳಲ್ಲಿ ಉಸಿರುಕಟ್ಟುವಿಕೆಯಂಥ ಪರಿಸ್ಥಿತಿ ಕಂಡಾಗ ತಕ್ಷಣ ಚಿಕಿತ್ಸೆ ಕೊಡಿಸಬೇಕೆಂದರು. ನ್ಯುಮೋನಿಯಾಕ್ಕೆ ಪರಿಸರ ಮಾಲಿನ್ಯ, ಅಪೌಷ್ಟಿಕತೆ ಮುಖ್ಯ ಕಾರಣವಾಗಿದೆ ಎಂದರು.

ಮಾರುತಿ ನಗರ ಆರೋಗ್ಯ ಕೇಂದ್ರದ ಡಾ.ಯಶಸ್ ಮಾತನಾಡಿದರು. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ತಿಪ್ಪಮ್ಮ, ಕಾತ್ಯಾಯನಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ್ ಕುಮಾರ್, ನಂದೀಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರೂಪಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net