

ಹಾಸನ: ನವದೆಹಲಿಯಲ್ಲಿ ಮಾ.12ರಿಂದ 14ರವರೆಗೆ ನಡೆದ ಸೀನಿಯರ್ ನ್ಯಾಷನಲ್ ರ‌್ಯಾಂಕಿಂಗ್ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ವಿ.ಎನ್. ಭೂಮಿಕಾ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಬಳ್ಳಾರಿಯ ಜೆಎಸ್‌ಡಬ್ಲುೃ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಫೋರ್ಟ್ಸ್ ಇಲ್ಲಿ ತರಬೇತಿ ಪಡೆಯುತ್ತಿರುವ ಭೂಮಿಕಾ ಅವರು ಈ ಹಿಂದೆ ಬೆಳಗಾವಿಯ ಬಿವೈಇಎಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು. ಮೂಲತಃ ಹಾಸನದವರಾದ ಭೂಮಿಕಾ ಕಳೆದ ತಿಂಗಳು ಪಂಜಾಬ್‌ನ ಅಮೃತಸರದಲ್ಲಿ ನಡೆದ ಆಲ್ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕೆ ಭಾಜನರಾಗಿದ್ದರು.