ನ್ಯಾಯಾಧೀಶರ ಮೇಲಿದೆ ಮಹತ್ತರ ಜವಾಬ್ದಾರಿ

MDG judge
ಮೂಡಿಗೆರೆ ಜೆಎಂಎ್ಸಿ ನ್ಯಾಯಾಧೀಶರಾದ ಕೆ.ಕೆ.ಸುರಕ್ಷಾ ಅವರನ್ನು ವಕೀಲರ ಸಂಘದಿಂದ ಗೌರವಿಸಲಾಯಿತು.
Published on

ಮೂಡಿಗೆರೆ: ಜನತೆಗೆ ನ್ಯಾಯ ದೊರಕಿಸಿಕೊಡುವಲ್ಲಿ ನ್ಯಾಯಾಧೀಶರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನ್ಯಾಯಾಧೀಶರ ಜವಾಬ್ದಾರಿ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ಜನರ ನಂಬಿಕೆ ಕುರಿತಂತೆ ಆಳವಾದ ಜ್ಞಾನ ಹೊಂದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಜಯಪ್ರಕಾಶ್ ಹೇಳಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀೀಶರು ಹಾಗೂ ಮೂಡಿಗೆರೆ ಜೆಎಂಎ್ಸಿ ಹುದ್ದೆ ಜವಾಬ್ದಾರಿ ವಹಿಸಿಕೊಂಡ ನೂತನ ನ್ಯಾಯಾಧೀಶೆ ಕೆ.ಕೆ.ಸುರಕ್ಷಾ ಅವರನ್ನು ಬುಧವಾರ ವಕೀಲರ ಸಂಘದಿಂದ ಗೌರವಿಸಿ ಮಾತನಾಡಿ, ನ್ಯಾಯಾಲಯದಲ್ಲಿ ತ್ವರಿತ ಜನಮನ್ನಿತ ನ್ಯಾಯ ನೀಡಲು ವಕೀಲರ ಜವಾಬ್ದಾರಿ ಹೆಚ್ಚಿರುತ್ತದೆ ಎಂದರು.

ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ವಕೀಲಿ ವೃತ್ತಿಯ ಮಹತ್ವ ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ನಟರಾಜ್, ಕಾರ್ಯದರ್ಶಿ ಕೆ.ಸಿ.ಚಂದ್ರಶೇಖರ್, ವಕೀಲರಾದ ಕೆ.ಎಂ.ಪ್ರಶಾಂತ್, ಬಿ.ಜಗದೀಶ್, ಎಂ.ವಿ.ಜಯರಾಜ್, ರೂಪಾ, ರೇಣುಕಾ, ಕೆ.ವಿಶಾಲಾ, ಎನ್.ಜೆ.ಉದಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net