

ಹಾಸನ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿರುವ ಜೈಶಂಕರ್ ಅವರ ಹಾಸನ ನಗರದ ಎಸ್‌ಬಿಎಂ ಲೇಔಟ್‌ನಲ್ಲಿರುವ ಮನೆಯಲ್ಲಿ ಕಳ್ಳತನಕ್ಕೆ ಯತ್ನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ನಗರದ ಎಸ್‌ಬಿಎಂ ಕಾಲೋನಿಯಲ್ಲಿರುವ ಮನೆಯನ್ನು ನ್ಯಾ.ಜೈಶಂಕರ್ ಅವರು ಭರತ್ ಎನ್ನುವವರಿಗೆ ಬಾಡಿಗೆಗೆ ನೀಡಿದ್ದಾರೆ. ಸೋಮವಾರ ರಾತ್ರಿ ಕಳ್ಳರು ಮನೆಯ ಹಿಂಬಾಗಿಲನ್ನು ಕಬ್ಬಿಣದ ರಾಡ್‌ನಿಂದ ಮುರಿದು ಒಳ ನುಗ್ಗಿದ್ದಾರೆ. ಒಳಬಂದ ಕಳ್ಳರು ಬೀರು ಒಡೆಯುವಾಗ ಶಬ್ದ ಕೇಳಿದ ಮನೆಯಲ್ಲಿದ್ದ ಕಾರಿನ ಚಾಲಕ ತಕ್ಷಣ ಲೈಟ್ ಆನ್ ಮಾಡಿದ್ದಾರೆ. ಲೈಟ್ ಆನ್ ಆದ ತಕ್ಷಣ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಮನೆಯಿಂದ ಓಡಿ ಹೋಗುವಾಗ ಏರ್ ಗನ್, ಕಬ್ಬಿಣದ ರಾಡ್ ಅನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ 57 ರಲ್ಲಿ ನ್ಯಾಯಾಧೀಶರಾಗಿರುವ ಜೈಶಂಕರ್ ಅವರು ಚಿತ್ರನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಚಾರ್ಯ ಪ್ರಕರಣದ ಜಡ್ಜ್ ಆಗಿದ್ದಾರೆ.