ನ್ಯಾಯಾಧೀಶರ ಮನೆಯ ಬ್ಯಾಟರಿ ಕಳವು

..
Published on

ಬಳ್ಳಾರಿ : ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ಮತ್ತು ೪ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ವಾಸವಿರುವ ವಸತಿ ಗೃಹದ ಹೊರಗೆ ಆಳವಡಿಸಿದ್ದ ಐದು ಯುಪಿಎಸ್ ಬ್ಯಾಟರಿ ಕಳ್ಳತನವಾಗಿವೆ. ಈ ಕುರಿತು ಬಳ್ಳಾರಿಯ ಗಾಂನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಸ್ಥಳೀಯ ಪಾರ್ವತಿ ನಗರದಲ್ಲಿನ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ಮತ್ತು ೪ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ವಾಸವಿರುವ ವಸತಿ ಗೃಹ ಸಂಖ್ಯೆ:೯ಎ ಮತ್ತು ೯ಬಿ ರಲ್ಲಿ ಮನೆಯ ಹೊರಗೆ ಆಳವಡಿಸಿದ್ದ ೯೮ ಸಾವಿರ ಮೌಲ್ಯದ ಐದು ಯುಪಿಎಸ್ ಬ್ಯಾಟರಿಗಳನ್ನು ಯಾರೂ ಕಳ್ಳತನ ಮಾಡಿದ್ದಾರೆ ಎಂದು ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಶಿರಸ್ತೆದಾರರ ಜಯಣ್ಣ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net