

ಚಿತ್ರದುರ್ಗ: ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ ತಮಗೆ ನಂಬಿಕೆ ಇದೆ. ತಮ್ಮ ಮಗನ ಸಾವಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು, ಹತ್ಯೆಗೀ ಡಾದ ರೇಣುಕಸ್ವಾಮಿಯ ತಂದೆ ಕಾಶೀನಾಥಯ್ಯ ಶಿವನಗೌಡ್ರು ಹೇಳಿದರು.
ಹತ್ಯೆಆರೋಪಿಗಳ ಪೈಕಿ ಎ-1 ಪವಿತ್ರಾಗೌಡ ಹಾಗೂ ಎ-2 ನಟ ದರ್ಶನ್ ಜಾಮೀನು ಅರ್ಜಿ ವಜಾ ಹಿನ್ನೆಲೆ, ಸೋಮವಾರ ಸುದ್ದಿಗಾ ರರೊಂದಿಗೆ ಮಾತನಾಡಿದ ಅವರು, ಎಸ್‌ಪಿಪಿ ಪ್ರಸನ್ನ ಅವರು ಉತ್ತಮವಾಗಿ ವಾದ ಮಂಡಿಸಿದ್ದಾರೆ. ಪವಿತ್ರಾ ಗೌಡ ಹಾಗೂ ದರ್ಶನ್ ಜಾ ಮೀನು ಅರ್ಜಿ ವಜಾ ಆಗಿರುವುದನ್ನು ಸ್ವಾಗತಿಸುತ್ತೇವೆ. ತಪ್ಪಿಸ್ಥರಿಗೆ ಶಿಕ್ಷೆ ವಿಧಿಸುವ ಕುರಿತು ಕೋರ್ಟ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪುತ್ರನ ಸಾವಿನ ದುಃಖದಿಂದ ಇನ್ನೂ ಹೊರಬರದ ಕಾಶಿನಾಥಯ್ಯ ಪ್ರತಿಕ್ರಿಯೆ ನೀಡಿದರು.
ಸಂಬಂಧಿ ಷಡಕ್ಷರಯ್ಯ ಮಾತನಾಡಿ, ಹತ್ಯೆ ಪ್ರಕರಣದ ವಿಚಾರಣೆ ಫಾಸ್ಟ್‌ಟ್ರಾೃಕ್ ಕೋರ್ಟ್‌ನಲ್ಲಿ ನಡೆಯಬೇಕು. ರೇಣುಕಸ್ವಾಮಿ ಪತ್ನಿ ಸಹನಾಗೆ ಮುಂದಿನ ತಿಂಗಳು ಹೆರಿಗೆ ಆಗಲಿದೆ. ತಾಯಿ, ಮಗುವಿನ ಜೀವನೋಪಾಯಕ್ಕೆ ಸರ್ಕಾರ ನೆರವು ನೀಡಬೇಕಿದೆ. ಸಹನಾಗೆ ನೌಕರಿ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.