ನ್ಯಾಯಾಂಗದ ಗೌರವಕ್ಕೆ ಧಕ್ಕೆ

10 KAMPLI 01
Published on

ಕಂಪ್ಲಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯುವ ಯತ್ನ ಖಂಡಿಸಿ ಹಾಗೂ ರಾಜ್ಯದಲ್ಲಿನ ಏಡ್ಸ್ ಸಂತ್ರಸ್ತರಿಗೆ ಸಹಾಯಧನ ನೀಡುವಂತೆ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಿದರು.

ವೇದಿಕೆ ಕಾರ್ಯಾಧ್ಯಕ್ಷ ಟಿ.ಎಚ್.ಎಂ.ರಾಜಕುಮಾರ ಮಾತನಾಡಿ, ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಕೃತ್ಯ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಏಡ್ಸ್‌ನಿಂದ ಬಳಲುತ್ತಿರುವವರಿಗೆ ವಿಶೇಷ ಮಾಸಾಶನ, ಮಕ್ಕಳಿಗೆ ಶಿಕ್ಷಣ, ಬಸ್-ರೈಲುಗಳಲ್ಲಿ ಉಚಿತ ಸಂಚಾರ ವ್ಯವಸ್ಥೆ, 10 ಲಕ್ಷ ರೂ. ವಿಮೆ ಸೌಲಭ್ಯ ನೀಡಬೇಕು. ಸ್ಥಳೀಯ ಆಡಳಿತಗಳಲ್ಲಿ ಭಿಕ್ಷುಕರ ಕರ, ಗ್ರಂಥಾಲಯದ ಕರ ವಿಧಿಸುವಂತೆ ಏಡ್ಸ್ ಸಂತ್ರಸ್ತರ ಕರ ವಿಧಿಸುವ ಮೂಲಕ ಸಂತ್ರಸ್ತರ ಜೀವನೋಪಾಯಕ್ಕೆ ಸೌಲಭ್ಯ ಕಲ್ಪಿಸಲು ಬಳಸಬೇಕು ಎಂದು ಒತ್ತಾಯಿಸಿದರು.

ನಾನಾ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ಗೋಪಾಲ್, ವಸಂತರಾಜ ಕಹಳೆ, ಎಚ್.ಮರಿಯಣ್ಣ, ಕೆ.ಲಕ್ಷ್ಮಣ ಬಸವರಾಜ, ಎ.ಎಸ್.ಯಲ್ಲಪ್ಪ, ವೆಂಕಟೇಶ, ಎಚ್.ಮಂಜು, ರವಿ ಮಣ್ಣೂರು, ಹುಸೇನಪ್ಪ, ರಾಮಾಂಜನೇಯ, ರುದ್ರಪ್ಪ, ಬಸಪ್ಪ, ನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net