ನ್ಯಾಯಾಂಗ ವಶಕ್ಕೆ ಮುರುಘಾ ಸ್ವಾಮೀಜಿ

ctd 29 murga case (2)---0003
Published on

ಚಿತ್ರದುರ್ಗ: ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಸ್ವಾಮೀಜಿ ಜಿಲ್ಲಾ ನ್ಯಾಯಾಲಯದ ಮುಂದೆ ಸೋಮವಾರ ಹಾಜರಾದರು. ಹೈಕೋ ರ್ಟ್ ಕಳೆದ ನವೆಂಬರ್ 8ರಂದು ಮಂಜೂರು ಮಾಡಿದ್ದ ಷರತ್ತು ಬದ್ಧ ಜಾಮೀನು ಆದೇಶಕ್ಕೆ ಸುಪ್ರೀಂಕೋರ್ಟ್ ಏ.23ರಂದು ತಡೆ ನೀ ಡಿತ್ತು.
ಏಳು ದಿನದೊಳಗೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗುವಂತೆ ಸ್ವಾಮೀಜಿಗೆ ಕಾಲಾವಕಾಶವನ್ನೂ ಕೊಟ್ಟಿತ್ತು. ಸಾಕ್ಷಿ ದಾಖಲೆಗಳ ಪರಿ ಶೀಲನೆ ಪೂರ್ಣಗೊಳ್ಳುವ ತನಕ ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿ ಇರಬೇಕು ಹಾಗೂ ಕೆಳ ನ್ಯಾಯಾಲಯ ತನ್ನೆಲ್ಲ ವಿಚಾರಣೆ ಪ್ರ ಕ್ರಿ ಯೆಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಏ.23ರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಧ್ಯಾಹ್ನ 2ಗಂಟೆಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರ ಭಾರ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರೆದುರು ಸ್ವಾಮೀಜಿ ಹಾಜರಾದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮೇ 27 ರವರೆಗೆ ಸ್ವಾಮೀಜಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶಿಸಿದರು.
ವಿಚಾರಣೆ ವೇಳೆ ಹಾಜರಿದ್ದ ಡಿವೈಎಸ್‌ಪಿ ಕೆ.ದಿನಕರ್‌ಗೆ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಕಳಿಸುವಂತೆ ಸೂಚಿಸಿದರು. ಕೋರ್ಟಿ ನಿ ಂದ ಸ್ವಾಮೀಜಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದ ಪೊಲೀಸರು,ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಕಾರಾಗೃಹಕ್ಕೆ ಕಳಿಸಿದರು.
ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಮೇ15ಕ್ಕೆ ನಿಗದಿಯಾಗಿದ್ದು,ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸ್ವಾಮೀಜಿ ಪರ ವಕೀಲರು ಸೋಮವಾರ ಮಧ್ಯಾಹ್ನ 3.25ಕ್ಕೆ ಆಡ್ವಾನ್ಸ್ ಅಪ್ಲಿಕೇಶನ್ ಸಲ್ಲಿಸಿದರು. ಹೈಕೋರ್ಟ್ ಸೂಚನೆಯಂತೆ ಕಳೆದ ಮಾರ್ಚ್ 20ರಂದು ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಮೇ 15ಕ್ಕೆ ವಿಚಾರಣೆ ಮುಂದೂಡಿತ್ತು.
ಸ್ವಾಮೀಜಿ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಎರಡು ಪೋಕ್ಸೋ ಪ್ರಕರಣಗಳು ಹಾಗೂ ದೌರ್ಜನ್ಯ ಪ್ರತಿಬಂಧ ಕ ಕಾಯ್ದೆ ಅಡಿ ಕೇಸು ದಾಖಲಾಗಿತ್ತು. ಮೊದಲ ಪೋಕ್ಸೋ ಪ್ರಕರಣದಡಿ 2022 ಸೆಪ್ಟೆಂಬರ್ 1ರಂದು ಸ್ವಾಮೀಜಿಯನ್ನು ಬಂಧಿಸಲಾಗಿತ್ತು.
ಷರತ್ತು ಬದ್ಧ ಜಾಮೀನಿನಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಿಂದ(ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ)ಹೊರಗಿದ್ದ ಸ್ವಾಮೀಜಿ ಕೋ ರ್ಟಿಗೆ ಹಾಜರಾದ ಬಳಿಕ ಬಿಗಿ ಬಂದೋಬಸ್ತ್‌ನಲ್ಲಿ ಪೊಲೀಸರು ಕಾರಾಗೃಹಕ್ಕೆ ಕರೆದೊಯ್ಯದರು.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕಿ ಕೆ.ಬಿ.ನಾಗವೇಣಿ,ಆರೋಪಿ ಪರ ವಕೀಲರಾದ ಕೆಬಿಕೆ ಸ್ವಾಮಿ, ಎಂ.ಉಮೇಶ್,ಕೆ. ಎ ನ್.ವಿಶ್ವನಾಥ್,ಪ್ರತಾಪ್‌ಜೋಗಿ ಮತ್ತಿತರರು ಆರೋಪಿ ಪರ ವಕೀಲರು ಇದ್ದರು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ,ಗ್ರಾಮಾಂತರ ಠಾಣೆ ಪಿಐ ಸುನೀಲ್‌ಕುಮಾರ್,ನಗರ ಠಾಣೆ ಪಿಐ ಹರೀಶ್‌ಪಾಟೀಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net