ನ್ಯಾಯಾಂಗ ಬಂಧನದಲ್ಲಿದ್ದ ಅಧಿಕಾರಿ ಸಾವು

ctd 26 hosaduraga
Published on

ಚಿತ್ರದುರ್ಗ:ಖಾಸಗಿ ಆಸ್ತಿ ಇ ಸ್ವತ್ತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟು,ಕಳೆದ ಸೋಮವಾರ 25 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ಆರೋಪದೊಂದಿಗೆ ಲೋಕಾ ಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಹೊಸದುರ್ಗ ಪುರಸಭಾ ಮುಖ್ಯಾಧಿಕಾರಿ ಜಿ.ವಿ.ತಿಮ್ಮರಾಜು(40) ಹೃದಾಯಾಘಾತ ದಿಂದ ನಿಧನ ಹೊಂದಿದ್ದಾರೆ.

ಜಿಲ್ಲಾ ಕಾರಾಗೃಹ ಅಧಿಕಾರಿಗಳು ತಿಳಿಸಿರುವಂತೆ ಶನಿವಾರ ಬೆಳಗ್ಗೆ 7ರ ಸಮಯದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದೊತ್ತಡ,ಇಸಿಜಿ,ಇತ್ಯಾದಿ ಪರೀಕ್ಷೆಗೆ ಅವರನ್ನು ಒಳಪಡಿಸಿದರೂ ತಿಮ್ಮರಾಜು ಹತ್ತಾ ರು ನಿಮಿಷದಲ್ಲಿ ಕೊನೆ ಉಸಿರು ಎಳೆದಿದ್ದಾರೆ ಎಂದು ಡಿಎಸ್ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.

ಸಾವಿನ ಸುದ್ದಿ ತಿಳಿದು ಚಿತ್ರದುರ್ಗಕ್ಕೆ ದೌಡಾಯಿಸಿದ ಮೃತರ ಪತ್ನಿ,ಸಹೋದರರು ಹಾಗೂ ಸಂಬಂಧಿಕರ ಸಹಿತ ಹೊಸದುರ್ಗದಿಂದ ಹಲವರು ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ವೇಳೆ ಮೃತರ ಸಂಬಂಧಿಕರು,ಕೆಲವು ಪುರಸಭೆ ಸದಸ್ಯರು,ಲೋಕಾಯುಕ್ತ ಪೊಲೀಸರು, ಜೈಲು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳದ ಹೊರತು ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುವುದಿಲ್ಲವೆಂದು ಹೇಳಿ ಎಸ್‌ಪಿ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net