ನ್ಯಾಯದಾನದಲ್ಲಿ ವಿಳಂಬವಾದರೆ ಕ್ರಮ

web1
ಬೈಲಹೊಂಗಲದ ನ್ಯಾಯಾಲಯದಲ್ಲಿ ಏರ್ಪಡಿಸಿದ್ದ ಲೋಕ ಅದಾಲತ್ ತಿಳಿವಳಿಕೆ ಕಾರ್ಯಕ್ರಮವನ್ನು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮೀದೇವಿ ಉದ್ಘಾಟಿಸಿದರು. ನ್ಯಾಯಾಧೀಶ ಮುರಳಿ ಮೋಹನ ರೆಡ್ಡಿ, ನ್ಯಾಯಾಧೀಶೆ ಉಷಾರಾಣಿ ಆರ್., ಎಸ್.ಬಿ.ಅನಿಗೋಳ, ಮಂಜುನಾಥ ಸೋಮಣ್ಣವರ ಇತರರು ಇದ್ದರು.
Published on

ಬೈಲಹೊಂಗಲ: ನ್ಯಾಯದಾನ ಕಾರ್ಯದಲ್ಲಿ ವಿಳಂಬ ಹಾಗೂ ಅಸಡ್ಡೆ ಮಾಡುವ ಸಿಬ್ಬಂದಿಯನ್ನು ಸರಿದಾರಿಗೆ ತರಲು ನನ್ನ ಕಚೇರಿ 24 ಗಂಟೆ ತೆರೆದಿರುತ್ತದೆ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮೀದೇವಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕ ಅದಾಲತ್ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಕ್ಷಿದಾರರಿಗೆ ನ್ಯಾಯ ನೀಡುವಲ್ಲಿ ನ್ಯಾಯಾಲಯ ಸಿಬ್ಬಂದಿ ಶ್ರಮ ಅತ್ಯಂತ ಮಹತ್ವದ್ದಾಗಿದೆ. ನೊಂದ ಜನಕ್ಕೆ ನ್ಯಾಯ ನೀಡುವಾಗ ನ್ಯಾಯಾಂಗ ವ್ಯವಸ್ಥೆ ಚುರುಕುಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರೂ ಸೇರಿ ಗುರುತರ ಜವಾಬ್ದಾರಿ ನಿಭಾಯಿಸೋಣ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ನ್ಯಾಯಾಧೀಶ ಮುರಳಿ ಮೋಹನ ರೆಡ್ಡಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ವಿಶಾಲಾರ್ಥ ಹೊಂದಿದ್ದು, ಕೇವಲ ನ್ಯಾಯಾಲಯದಲ್ಲಿ ವಕೀಲರ ವಾದ-ಪ್ರತಿವಾದಗಳ ಮುಖಾಂತರ ಮಾತ್ರ ನ್ಯಾಯ ತೀರ್ಮಾನ ಆಗುವುದಿಲ್ಲ. ನೊಂದ ಕಕ್ಷಿದಾರರ ಆಪ್ತಸಮಾಲೋಚನೆ ಮಾಡುವ ಮೂಲಕವೂ ತ್ವರಿತವಾಗಿ ನ್ಯಾಯ ನೀಡುವ ಮೂಲಕ ಕಕ್ಷಿದಾರರು ವಿವಾದಗಳನ್ನು ಸೌಹಾರ್ದವಾಗಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದರು.

ಗ್ರಾಮೀಣ ಮಟ್ಟದಲ್ಲಿ ನ್ಯಾಯಾಲಯ ತೆರೆಯುವ ಮೂಲಕ ತ್ವರಿತ ನ್ಯಾಯ ಇತ್ಯರ್ಥಕ್ಕಾಗಿ ಹಾಗೂ ಗ್ರಾಮೀಣ
ನೊಂದ ಜನ ನ್ಯಾಯಲಯಕ್ಕೆ ತಮ್ಮ ಪ್ರಕರಣ ದಾಖಲು ಮಾಡುವುದಕ್ಕೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು. ಸೆ.9ರಂದು ನಡೆಯುವ ಲೋಕ ಅದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಮುಕ್ತಾಯಗೊಳಿಸಬೇಕು. ದೇಶದಲ್ಲಿ ಒಂದು ಪ್ರಕರಣಕ್ಕೆ ಒಂದು ದಿನಕ್ಕೆ ಸುಮಾರು 2 ಸಾವಿರ ರೂ.ಸರ್ಕಾರ ಖರ್ಚು ಮಾಡುತ್ತಿದೆ ಎಂದರು.

ಹಿರಿಯ ಶ್ರೇಣಿ ನ್ಯಾಯಾಧೀಶೆ ಉಷಾರಾಣಿ ಆರ್., ಪ್ರಧಾನ ನ್ಯಾಯಾಧೀಶ ಮನುಶರ್ಮ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ.ಅನಿಗೋಳ, ಉಪಾಧ್ಯಕ್ಷ ಮಂಜುನಾಥ ಸೋಮಣ್ಣವರ, ಜೆ.ಕೆ.ರಿಜಾ, ಎ.ಎ.ಅಥಣಿ, ಎಂ.ಆರ್.ಮೆಳವೆಂಕಿ, ಎಂ.ಎಸ್.ದೇಶಪಾಂಡೆ, ಎಂ.ಎಂ.ಅಬ್ಬಾಯಿ, ಸಿ.ಎಸ್. ಅಷ್ಟಗಿಮಠ, ಜಯಶ್ರೀ ಬೂದಿಹಾಳ, ಎ್.ಎಸ್.ಸಿದ್ದನಗೌಡರ ಎಸ್.ಜಿ.ಬೂದಯ್ಯನವರಮಠ, ಆಯ್.ಬಿ.ಮೆಟಿ, ರಮೇಶ ಕುರಬರ, ಐ.ಬಿ.ಸಿದ್ದಣ್ಣವರ ಇದ್ದರು.

ದಿಲಾವಾರ ಶಿಲ್ಲೆದಾರ ಪ್ರಾರ್ಥಿಸಿದರು. ಬಸವರಾಜ ದೊತರ ಸ್ವಾಗತಿಸಿದರು. ಎಸ್.ಎಸ್.ಆಲದಕಟ್ಟಿ ನಿರೂಪಿಸಿದರು. ಡಿ.ವೈ.ಗರಗದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net