ನ್ಯಾಯಕ್ಕಾಗಿ ಸಿಎಂ ಕಚೇರಿಗೂ ಪತ್ರ

Pressmeet
Published on

ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ, ತುರುವನೂರು ಪೊಲೀಸ್ ಠಾಣಾಧಿಕಾರಿಯಿಂದ ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ. ಹೀಗಾಗಿ ನ್ಯಾಯ ದೊರಕಿಸಿಕೊಡುವಂತೆ ಮುಖ್ಯಮಂತ್ರಿ ಕಚೇರಿಗೂ ಪತ್ರ ಬರೆಯಲಾಗಿದೆ ಎಂದು ಪಿ.ಟಿ.ಆನಂದಮ್ಮ ತಿಳಿಸಿದರು.


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ತಿಯ ಪಾಲು ವಿಚಾರವಾಗಿ ಅಕ್ಕನ ಮಗನಿಂದಲೇ ಹಲ್ಲೆಯಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ 8 ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದೇನೆ. ಆದರೆ, ವೈದ್ಯಾಧಿಕಾರಿ, ಪೊಲೀಸರು ತಮಗೆ ಅನುಕೂಲವಾಗುವಂತೆ ಎಂಎಲ್‌ಸಿ, ಎಫ್‌ಐಆರ್‌ನಲ್ಲಿ ವರದಿ ಬರೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿದರು.


2022ರ ಅಕ್ಟೋಬರ್‌ನಲ್ಲಿ ಘಟನೆ ನಡೆದಿದ್ದು, ಎಸ್‌ಪಿ, ಡಿಸಿ, ಪೊಲೀಸ್ ಆಯುಕ್ತರು, ಸಿಎಂ ಸಚಿವಾಲಯದ ಕಚೇರಿಗೂ ಮನವಿ ಸಲ್ಲಿಸಿದ್ದೇನೆ. ಈವರೆಗೂ ನ್ಯಾಯ ದೊರೆತಿಲ್ಲ. ಬದಲಿಗೆ ಸಹೋದರಿ ಪುತ್ರನಿಂದ ನನ್ನ ವಿರುದ್ಧವೇ ಪ್ರಕರಣ ದಾಖಲಾಗಿದೆ ಎಂದು ಅಳಲು ತೋಡಿಕೊಂಡರು.


ಪತಿ ಕೆ.ಎನ್.ಹನುಮಂತರೆಡ್ಡಿ, ವಕೀಲ ನಾಗೇಶ್, ಮೌನೇಶ್, ಅಪ್ಪಣ್ಣರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net