ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಮಾಜಿ ಕಾರ್ಪೊರೇಟರ್ ಪುತ್ರಿಯಿಂದ ಹಲವರಿಗೆ ಪಂಗನಾಮ

download
Published on

 
ವಿಜಯವಾಣಿ ಸುದ್ದಿಜಾಲ ಕಾರವಾರ

ಇಲ್ಲಿನ ಅರಗ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ  ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಮಾಜಿ ಕಾರ್ಪೊರೇಟರ್ ಪುತ್ರಿಯ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರೀಯ ವಿದ್ಯಾಲಯದಲ್ಲಿ ಈ ಹಿಂದೆ ಅರೆಕಾಲಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಗರದ ಬಾಡದ ಪೂರ್ಣಿಮಾ ಸತೀಶ ಕೊಳಂಬಕರ್ ವಿರುದ್ಧ ಬಿಣಗಾ ನಿವಾಸಿ ಸೂರ್ಯಾ ಅನಿಲ್ ಎಂಬ ಮಹಿಳೆ ದೂರು ನೀಡಿದ್ದಾರೆ.
ತನಗೆ ನೌಕಾಸೇನೆಯಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ನಿಮ್ಮ ಮಗ ಅಶ್ವಿನ್ ಅನಿಲ್‌ಗೆ ಅಲ್ಲಿ ಕೆಲಸ ಕೊಡಿಸುತ್ತೇನೆ. ಇನ್ನೂ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅವರಿಗೂ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದಳು ಎನ್ನಲಾಗಿದೆ. ಸೂರ್ಯಾ ಹಾಗೂ ಆಕೆಯ ಸಂಬಂಧಿಕರಿಂದ 2020 ರಿಂದ ಇದುವರೆಗೆ ಒಟ್ಟು 51.89 ಲಕ್ಷ ರೂ.ಗಳನ್ನು ಪಡೆದುಕೊಂಡು ಅದರಲ್ಲಿ 8.76 ಲಕ್ಷ ರೂಗಳನ್ನು ಮಾತ್ರ ಮರಳಿಸಿ ಉಳಿದ 43.12 ಲಕ್ಷ ರೂ.ಗಳನ್ನು ಮರಳಿಸದೇ, ಉದ್ಯೋಗವನ್ನೂ ಕೊಡಿಸದೇ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net