

ವಿಜಯವಾಣಿ ಸುದ್ದಿಜಾಲ ಧಾರವಾಡನೌಕರಿ ಕೊಡಿ ಇಲ್ಲ ದಯಾಮರಣ ಕೊಡಿ' ಎಂದು ಬೇಡಿಕೆ ಇಟ್ಟ ಸವದತ್ತಿ ಜಾಕ್‌ವೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಜಲಮಂಡಳಿಯ ಹಂಗಾಮಿ ನೌಕರನೊಬ್ಬ ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಮೊಬೈಲ್ ಟವರ್ ಏರಿ ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಜೆ ನಡೆಯಿತು. ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ೧೨ ದಿನಗಳಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಹಂಗಾಮಿ ೩೫೮ ನೌಕರರು ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೂ ಪಾಲಿಕೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ ತಳವಾರ ಎಂಬಾತ ಟವರ್ ಏರಿ ಪ್ರತಿಭಟನೆ ನಡೆಸಿದನು. ಈತ ಸವದತ್ತಿಯ ಜಾಕ್‌ವೆಲ್‌ನಲ್ಲಿ ಕಳೆದ ೧೮ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ.ನೌಕರಿ ಕೊಡಿ ಇಲ್ಲ ದಯಾಮರಣ ಕೊಡಿ' ಎಂಬ ಭಿತ್ತಿಪತ್ರ ಹಿಡಿದು ಟವರ್ ಏರಿ ಮರುನೇಮಕಕ್ಕೆ ಒತ್ತಾಯಿಸಿದನು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಕೆಳಗಿಳಿಸಲು ಗಂಟೆಗಟ್ಟಲೇ ಹರಸಾಹಸ ಪಟ್ಟರು. ಜನಜಾಗೃತಿ ಸಂಘದ ಪದಾಽಕಾರಿಗಳೊಂದಿಗೆ ಮೊಬೈಲ್ ಮೂಲಕ ಮಾತನಾಡಿಸಿ ಕೆಳಗಿಳಿಸಲು ಒಪ್ಪಿಸಲಾಯಿತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಮಲ್ಲಿಕಾರ್ಜುನನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮÁತನಾಡಿ, ಪಾಲಿಕೆ ಹಾಗೂ ಎಲ್ ಆ್ಯಂಡ್ ಟಿ ಕಂಪನಿಯು ೭ ತಿಂಗಳು ದುಡಿಸಿಕೊಂಡು ಸಂಬಳ ನೀಡದೆ, ೩೫೮ ನೌಕರರ ಮರುನೇಮಕ ಮÁಡಿಕೊಳ್ಳದೆ ಬಡವರನ್ನು ಬೀದಿಗೆ ತಂದು ನಿಲ್ಲಿಸಿದೆ. ಇದರಿಂದ ಮನನೊಂದು ಮಲ್ಲಿಕಾರ್ಜುನ ತಳವಾರ ಟವರ್ ಏರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾನೆ. ಈಗಲಾದರೂ ಸರ್ಕಾರ ಕಣ್ತೆರೆಯಬೇಕು ಎಂದರು.