ನೌಕರರ ಸಮಸ್ಯೆಗೆ ಸ್ಪಂದಿಸುವರಿಗೆ ಬೆಂಬಲಿಸಿ

Basavaraj balundagi
Published on

ಕಲಬುರಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿ¯್ಲÁಧ್ಯP್ಷÀ ರಾಜು ಲೇಂಗಟಿ ಆಡಳಿತಾವಧಿಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದು, ಪ್ರತಿ ವರ್ಷ ೧೦-೧೨ ಲP್ಷÀ ರೂ. ಸದಸ್ಯರ ವಂತಿಗೆ ಹಣ ದುರ್ಬಳಕೆಯಾಗಿದೆ. ಇದಕ್ಕೆ ತಿಲಾಂಜಲಿ ಇಡಲು ಪರಿವರ್ತನಾ ಪೆನಾಲ್‌ಗೆ ಮತದಾರರು ಬೆಂಬಲಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನ ಅಭ್ಯರ್ಥಿ ಬಸವರಾಜ ಬಳೂಂಡಗಿ ಹೇಳಿದರು.

ಜಿ¯್ಲೆಯಲ್ಲಿ ಸುಮಾರು ೧೨ ಸಾವಿರಕ್ಕಿಂತ ಹೆಚ್ಚಿನ ಸರ್ಕಾರಿ ನೌಕರರಿದ್ದು, ಪ್ರತಿ ಸರ್ಕಾರಿ ನೌಕರರಿಂದ ತಲಾ ೨೦೦ ರೂ. ವಂತಿಗೆ ಪಡೆದುಕೊಳ್ಳಲಾಗಿದೆ. ರಾಜ್ಯ ಘಟಕಕ್ಕೆ ೫೦ ರೂ, ತಾಲೂಕು ಘಟಕಗಳಿಗೆ ೫೦ ರೂ. ವಂತಿಗೆ ಭರಿಸುವ ನಿಯಮವಿದೆ. ಉಳಿದ ಹಣ ಎಲ್ಲಿಗೆ ಹೋಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸಾವಿರಾರು ಸರ್ಕಾರಿ ನೌಕರರಿದ್ದರೂ ಜಿಲ್ಲಾ ಘಟಕಕ್ಕೆ ಗ್ರಹಣ ಹಿಡಿದಿದೆ. ನೌಕರರ ಭವನ ನಿರ್ವಹಣೆ ಇಲ್ಲದೆ ಕೊಳಚೆಯಾಗಿದೆ. ಕಳೆದ ಐದು ವರ್ಷದಿಂದ ಎನ್‌ಪಿಎಸ್ ನೌಕರರಿಗೆ ಒಂದು ಹೋರಾಟ ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಆಗುತ್ತಿರುವ ಬಡ್ತಿ ವಂಚನೆ ವಿರುದ್ಧ ಯಾವುದೇ ಹೋರಾಟ, ಪತ್ರ ವ್ಯವಹಾರ, ಸಂವಾದ, ಕಾರ್ಯಾಗಾರ ಮಾಡಿಲ್ಲ. ಪ್ರತಿಭಾ ಪುರಸ್ಕಾರ, ಜಿಲ್ಲಾ ಸಮ್ಮೇಳನ ನಡೆಸದೆ ನಿಷ್ಕಾಳಜಿ ತೋರಿಸಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಅಧ್ಯಕ್ಷರ ಎಲ್ಲ ನಿಷ್ಕಾಳಜಿ, ನಿರಾಸಕ್ತಿಯನ್ನು ದೂರ ಮಾಡಿ, ಸರ್ಕಾರಿ ನೌಕರರ ನೋವು, ನಲಿವುಗಳಿಗೆ ಸ್ಪಂದಿಸುವ ಗುರಿಯೊಂದಿಗೆ ಸ್ಪರ್ಧಿಸಿರುವ ಪರಿವರ್ತನಾ ಪೆನಾಲ್‌ನ ಎಲ್ಲರನ್ನು ಬೆಂಬಲಿಸಬೇಕು ಎಂದು ಹೇಳಿದರು.

ಡಿ.೪ ರಂದು ಮತದಾನ: ೨೦೨೪-೨೯ನೇ ಸಾಲಿನ ಅವಧಿಗಾಗಿ ಪರಿವರ್ತನಾ ಪೆನಾಲ್‌ನಿಂದ ಜಿ¯್ಲÁಧ್ಯP್ಷÀ ಸ್ಥಾನಕ್ಕೆ ಸ್ಪರ್ಧಿಸಲಾಗಿದೆ. ದಿ. ೪ ರಂದು ಬೆಳಗ್ಗೆ ೯ರಿಂದ ಸಂಜೆ ೪ ಗಂಟೆವರೆಗೆ ಸರ್ಕಾರಿ ನೌಕರರ ಭವನದಲ್ಲಿ ಮತದಾನ ನಡೆಯಲಿದೆ. ನಮ್ಮ ಪ್ಯಾನೆಲ್‌ನಿಂದ ೫೪ ಜನ ಜಯಭೇರಿದ್ದು, ೭೬ ಮತದಾನಕ್ಕೆ ಅರ್ಹರಿz್ದÁರೆ. ಪ್ಯಾನೆಲ್‌ನ ಮೂರು ಅಭ್ಯರ್ಥಿಗಳಿಗೆ ಮತದಾನ ನೀಡಿ ಬೆಂಬಲಿಸಿದರೆ ಸಂಘದ ಚಿತ್ರಣ ಸಂಪೂರ್ಣ ಬದಲಾಯಿಸುವುದಾಗಿ ಭರವಸೆ ನೀಡಿದರು.

ಖಜಾಂಚಿ ಸ್ಥಾನದ ಅಭ್ಯರ್ಥಿ ಸುರೇಶ ವಗ್ಗೆ, ರಾಜ್ಯ ಪರಿಷತ್ ಸದಸ್ಯ ಅಭ್ಯರ್ಥಿ ಧರ್ಮರಾಯ ಜವಳಿ, ಪ್ರಮುಖರಾದ ಚಂದ್ರಕಾAತ ಏರಿ, ಚಂದ್ರಕಾAತ ತಳವಾರ, ಸಂತೋಷ ಸಲಗರ, ಬಾಬು ಮೌರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net