ನೌಕರರ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ

08ydg05
Published on

ಯಾದಗಿರಿ: ಸರಕಾರ ವಿವಿಧ ಯೋಜನೆ, ಕಾರ್ಯಕ್ರಮಗಳ ಸಮರ್ಪಕ ಅನುಷ್ಟಾನಕ್ಕೆ ಕಾಯರ್ಾಂಗದ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.

ಸೋಮವಾರ ಗುರುಮಠಕಲ್ನ ಖಾಸಾ ಮಠದಲ್ಲಿ ಅವರಣದಲ್ಲಿ ಸಕರ್ಾರಿ ನೌಕರರ ಸಂಘದಿಂದ ಹೊರತಂದ ನೂತನ ವರ್ಷದ ದಿನದಶರ್ಿಕೆ ಬಿಡುಗಡೆಗೊಳಿಸಿ ಮಾತನಾಡಿ, ಗುರುಮಠಕಲ್ ಮತಕ್ಷೇತ್ರದ ಸವಾರ್ಂಗಿಣ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ನಮ್ಮ ಆಶಯಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳ ಪಾತ್ರವೇ ಹೆಚ್ಚಿದೆ. ನನ್ನ ವೇಗಕ್ಕೆ ಕೆಲ ಅಧಿಕಾರಿಗಳ ನಿಧಾನಗತಿಯಲ್ಲಿದ್ದಾರೆ ಎಂದರು.

ಹೀಗಾಗಿ ಕೆಲವೊಂದು ಬಾರಿ ಒತ್ತಡದಲ್ಲಿ ಅಧಿಕಾರಿಗಳಿಗೆ ಏರು ಧ್ವನಿಯಲ್ಲಿ ಮಾತನಾಡಿರಬಹುದು.ಆದರೆ, ಉದ್ದೇಶಪೂರ್ವಕವಾಗಿ ಯಾರ ಮನಸ್ಸು ನೋಯಿಸುವ ಇರಾದೆ ನನ್ನದಾಗಿಲ್ಲ. ಸಕರ್ಾರಿ ನೌಕರರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ ಹಾಗೂ ನೌಕರರ ಭವನ ನಿಮರ್ಾಣಕ್ಕೆ ಕಾನೂನು ಚೌಕಟ್ಟಿನಲ್ಲಿ ಸಹಾಯ, ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಂಘದ ತಾಲೂಕಾಧ್ಯಕ್ಷ ಸಂತೋಷಕುಮಾರ ನಿರೇಟಿ ಮಾತನಾಡಿ, ಶಾಸಕಾಂಗ ರಚಿಸುವ ಜನಪರ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಕಾಯರ್ಾಂಗದ ಎಲ್ಲ ಸ್ಥರದ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net