ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

14BK2
Published on

ಬಸವಕಲ್ಯಾಣ: ನಗರದಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಇತ್ತೀಚೆಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘದ ಆದೇಶದ ಮೇರೆಗೆ, ಬಸವಕಲ್ಯಾಣ ಉಪ ವಿಭಾಗದಲ್ಲಿ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಸಮಿತಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಸೂರ್ಯಕಾಂತ ಬಾಳುಸಕರ್, ಉಪಾಧ್ಯಕ್ಷರಾಗಿ ಅನೀಲ ದೇವನಾಳೆ, ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಸಕ್ಕರಬಾವಿ, ಸಹ ಕಾರ್ಯದರ್ಶಿಯಾಗಿ ರಾಜಕುಮಾರ ರಟಕಲೆ, ಖಜಾಂಚಿಯಾಗಿ ಬಸವರಾಜ ಯಾಚೆ ಸಾಲಗರ, ಸದಸ್ಯರಾಗಿ ದಿಲೀಪಕುಮಾರ ಹೇಡೆ, ಶಾಂತವೀರ ಹಲಶಟ್ಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಮಲ್ಲಿಕಾರ್ಜುನ ಸಕ್ಕರಬಾಗಿ ತಿಳಿಸಿದ್ದಾರೆ.

ಆಯ್ಕೆಯಾದ ಎಲ್ಲರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಳೀಯ ಸಮಿತಿ ಹುಮನಾಬಾದ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net