ನೌಕರರ ಸಂಘಕ್ಕೆ ನಾಮ ನಿರ್ದೇಶನ

Govt Emloyees Association Photo
Published on

ಬೀದರ್: ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಮೂರು ಹುದ್ದೆಗಳಿಗೆ ಜಿಲ್ಲೆಯ ಮೂವರನ್ನು ನಾಮನಿರ್ದೇಶನ ಮಾಡಲಾಗಿದೆ. ಸತೀಶ ಪಾಟೀಲ್ (ಸಂಘಟನಾ ಕಾರ್ಯದರ್ಶಿ), ಪ್ರೊ. ರಾಜಕುಮಾರ ಹೊಸದೊಡ್ಡೆ ಹಾಗೂ ಮನೋಹರ ಕಾಶಿ (ಸಾಂಸ್ಕೃತಿಕ ಕಾರ್ಯದರ್ಶಿ) ನಾಮ ನಿರ್ದೇಶನಗೊಂಡಿದ್ದಾರೆ.

ನಗರದ ಪ್ರತಾಪನಗರದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನಾಮ ನಿರ್ದೇಶನ ಗೊಂಡ ಮೂವರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಜಿಲ್ಲೆಯ ಮೂವರಿಗೆ ರಾಜ್ಯ ಘಟಕದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಮುದಾಯ ಭವನದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ. ಭವನದಿಂದ ನೌಕರರಿಗೆ ವಿವಿಧ ಕಾರ್ಯಕ್ರಮ ಆಯೋಜನೆಗೆ ಅನುಕೂಲವಾಗಲಿದೆ. ನೌಕರರ ಅಭಿವೃದ್ಧಿಗಾಗಿ ಸಂಘ ಶ್ರಮಿಸುತ್ತಿದೆ ಎಂದು ಹೇಳಿದರು.

ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಮಡಿವಾಳ, ಜಿಲ್ಲಾ ಕಾರ್ಯಾಧ್ಯಕ್ಷ ರಾಜಕುಮಾರ ಪಾಟೀಲ್, ಪ್ರಮುಖರಾದ ಬಸವರಾಜ ಜಕ್ಕಾ, ಪ್ರಭುಲಿಂಗ ತೂಗಾವೆ, ಓಂಕಾರ ಮಲ್ಲಿಗೆ, ಬಕ್ಕಪ್ಪ, ರಾಜಶೇಖರ ಮಂಗಲಗಿ, ಅಶೋಕ ರೆಡ್ಡಿ, ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ, ಓಂಪ್ರಕಾಶ ದಡ್ಡೆ, ಬಳವಂತರಾವ್ ರಾಠೋಡ್, ಪ್ರೇಮಿಳಾಬಾಯಿ ಶಾಮರಾವ್, ಶಿವಕುಮಾರ ಘಾಟೆ, ಸುನೀಲ ಕಸ್ತೂರೆ, ಪ್ರಕಾಶ ಮಾಳಗೆ, ಸುಧಾಕರ ಶೇರಿಕಾರ, ದಿಲೀಪ, ನಾಗನಾಥ ಪಾಟೀಲ್, ಉಮೇಶ ಪಾಟೀಲ್, ಸುನೀಲ, ಉಮೇಶ, ಗಣಪತಿ, ವೆಂಕಟ ಸಿಂಧೆ, ಸಿದ್ದಪ್ಪ ಪಾಟೀಲ್, ಸೂರ್ಯಕಾಂತ ಸಾಲೆ, ಶಿವರಾಜ ಕಪಲಾಪುರೆ, ಪಾಂಡುರಂಗ ಬೆಲ್ದಾರ್, ಅನ್ಸಾರ್ ಬೇಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net